ಹುಬ್ಬಳ್ಳಿ- ಹುಬ್ಬಳ್ಳಿ ಕಾಟನ್ ಮಾರ್ಕೆಟ್ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಮೂವರನ್ನು ಬಂಧನ ಮಾಡುವಲ್ಲಿ ಉಪನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನ ಸಕಲೇಪುರದ ಜಮ್ಮನಹಳ್ಳಿ ಗ್ರಾಮದ ಲಿಂಗರಾಜ್ ಅಲಿಯಾಸ್ ಉಮೇಶ ರಾಮೇಗೌಡ, ಶಿರಸಿ ತಾಲೂಕಿನ ಅಮ್ಮೇನಹಳ್ಳಿಯ ಪ್ರವೀಣಕುಮಾರ ವೆಂಕಟರಮಣ ನಾಯ್ಕ ಹಾಗೂ ಗೋಕುಲ ರಸ್ತೆಯ ಜಗದೀಶನಗರದ ಬಿ.ಕೆ.ಶಿವಮೂರ್ತಿ ಎಂದು ಗುರುತಿಸಲಾಗಿದೆ. ಬಂಧಿತರಿಂದ 3ಲಕ್ಷ 80 ಸಾವಿರ ರೂಪಾಯಿ ಮೌಲ್ಯದ ನಾಲ್ಕು ವಿವಿಧ ಕಂಪನಿಯ ಬೈಕುಗಳನ್ನ ವಶಕ್ಕೆ ಪಡೆದು, ಆರೋಪಿಗಳನ್ನ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ಉಪನಗರ ಠಾಣೆ ಪೊಲೀಸ್ ಇನ್ಸಪೆಕ್ಟರ್ ರವಿಚಂದ್ರನ್ ಡಿ.ಬಿ, ಪಿಎಸ್ಐ ಅಶೋಕ ಬಿಎಸ್ ಪಿ, ಪ್ರೋಬೆಷನರಿ ಪಿಎಸ್ಐ ಯು.ಎಂ.ಪಾಟೀಲ, ಎಎಸ್ಐ ಎಂ.ಬಿ.ದೊಡ್ಡಮನಿ, ಸಿಬ್ಬಂದಿಗಳಾದ ಸುನೀಲ ಪಾಂಡೆ, ಮಲ್ಲಿಕಾರ್ಜುನ ಧನಿಗೊಂಡ, ಮಂಜುನಾಥ ಯಕ್ಕಡಿ, ಪ್ರಕಾಶ ಕಲಗುಡಿ, ಮಂಜುನಾಥ ಹಾಲವರ, ರವಿ ಹೊಸಮನಿ, ರೇಣು ಸಿಕ್ಕಲಗೇರ, ಜಗದೀಶ ಹಟ್ಟಿ, ಕುಮಾರ ಬಾಗವಾಡಮಠ, ಮಾಬುಸಾಬ ಮುಲ್ಲಾ, ರೇಣು ಸಿಕ್ಕಲಗೇರ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಆರೋಪಿಗಳ ಬಂಧನ ಮಾಡಿದ್ದಾರೆ.
Kshetra Samachara
08/10/2021 02:45 pm