ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪತಿಯಿಂದಲೇ ಪತ್ನಿಗೆ ಸ್ಕೇಚ್! ಆಕೆ ಬದುಕಿದ್ದೇ ಸಾಹಸ

ಹುಬ್ಬಳ್ಳಿ: ಆಕೆ ದಲಿತ ಬಡ ಕುಟುಂಬದಿಂದ ಬಂದಾಕೆ. ಜೊತೆಗಿದ್ದವರನ್ನ ನಂಬಿ ಎಲ್ಲವನ್ನೂ ನೀಡಿ ಜೀವನ ಆರಂಭಿಸಿದ್ದಳು,

ಇನ್ನೆನ್ನು ಎಲ್ಲವೂ ಚೆನ್ನಾಗಿದೆ ಅನ್ನೋವಷ್ಟರಲ್ಲಿ ಜಾತಿಯ ವಿಷ ಬೀಜದಿಂದ ಆಕೆ ಇದೀಗ ಶಾಶ್ವತ ಅಂಗವಿಕಲೇ ಆಗುವ ಸ್ಥಿತಿ ಬಂದಿದೆ. ನಂಬಿದ ಗಂಡನೇ ಇದೀಗ ಅವಳ ಬಾಳಲ್ಲಿ ಮುಳುವಾಗಿದ್ದಾನೆ, ಅಷ್ಟಕ್ಕೂ ಆಕೆ ಯಾರು ಅವಳ ಸ್ಥಿತಿ ಹೇಗಿದೆ ಎಂಬುದನ್ನಾ ತೋರಸ್ತೇವಿ ನೋಡಿ‌.

ಹೀಗೆ ಕಣ್ಣೀರಿಡುತ್ತಾ ಆಸ್ಪತ್ರೆ ಬೆಡ್ ಮೇಲೆ ಕುಳಿತಿರುವ ಈಕೆಯ ಹೆಸರು ಗೀತಾ ಅಂತ, ಮೂಲತಃ ಹಾವೇರಿ ಜಿಲ್ಲೆಯವಳು. ಈಕೆ ದಲಿತ ಕುಟುಂಬದ ಹೆಣ್ಣುಮಗಳು ಬದುಕು ನಡೆಸಲು ಸ್ವಸಹಾಯ ಗುಂಪಿನಲ್ಲಿ ಕೆಲಸ ಆರಂಭಿಸಿದ್ದ ಈಕೆಗೆ ಅಲ್ಲೊಬ್ಬ ಸವರ್ಣಿಯ ಜಾತಿಯ ಗಂಡಸಿನ ಪರಿಚಯವಾಗಿತ್ತು. ಪರಿಚಯ ಪ್ರೀತಿಯ ಮೂಲಕ ತಿರುಗಿ ಇಬ್ಬರು ಧರ್ಮಸ್ಥಳದಲ್ಲಿ ಮದುವೆ ಸಹ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಪತಿ ಅರ್ಜುನಗೌಡನಿಗೆ ಕೆಲಸ ತೆಗೆದ ಮೇಲೆ ಗೀತಾಳ ಜಾತಿ ಆದಾರದ ಮೇಲೆ ಗೊಬ್ಬರದ ಅಂಗಡಿ ತೆರೆದು ಲಾಭವನ್ನು ಸಹ ಪಡೆಯಲಾರಂಭಿಸಿದ. ಮೊದಮೊದಲು ಎಲ್ಲವೂ ಚೆನ್ನಾಗಿಯೇ ಇತ್ತು, ಆದ್ರೆ ಯಾವಾಗ ಅರ್ಜುನ ಗೌಡನ ಮನೆಯವರಿಂದ ನಿತ್ಯವೂ ಗೀತಾಳ ಮೇಲೆ ಕಿರುಕುಳ ಶುರುವಾಯ್ತು. ದಲಿತ ಮಹಿಳೆ ಎನ್ನುವ ಕಾರಣಕ್ಕೆ ಹಿಗ್ಗಾಮುಗ್ಗಾ ಥಳಿಸಿ ಮನೆ ಬಿಟ್ಟು ಹೋಗು ಅಂತಲೂ ಆವಾಜ್ ಹಾಕಿದ್ದರಂತೆ. ಆದ್ರೆ ಅವೆಲ್ಲವನ್ನ ಮೆಟ್ಟಿ ನಿತಂರೂ ಸಹ ಗೀತಾಳನ್ನ ಮುಗಿಸೋಕೆ ಅದೊಂದು ಪ್ಲಾನ್ ರೆಡಿಯಾಗಿತ್ತು.

ಗೀತಾಳ ಪತಿಯ ಮನೆಯವರು ಮತ್ತೊಂದು ಮದುವೆಗೆ ಸಿದ್ದರಾಗಿದರಂತೆ, ಅದನ್ನು ಪ್ರಶ್ನಿಸಿದಕ್ಕೆ ಗೀತಾಳನ್ನ ಮುಗಿಸುವ ಹಂತಕ್ಕೆ ಅವ್ರು ಬಂದಿದ್ರು. ಅರ್ಜುನಗೌಡ ಸೇರಿದಂತೆ ಅವರ ಕುಟುಂಬದವರು ಶಿಗ್ಗಾವಿಯಿಂದ ಅಪಹರಿಸಿ ಮನಬಂದಂತೆ ಥಳಿಸಿ, ಸತ್ತಿದ್ದಾಳೆ ಎಂದು ಭಾವಿಸಿ ದಾಂಡೇಲಿಯ ಕರ್ಕಿ ಹಳ್ಳದಲ್ಲಿ ಗೀತಾಳನ್ನ ಬಿಸಾಕಿ ಹೋಗಿದ್ರು, ಆದ್ರೆ ಹಳ್ಳಕ್ಕೆ ಬೀಳುತ್ತಿದ್ದಂತೆ ಎಚ್ಚರಗೊಂಡಿದ್ದ ಗೀತಾ ಅಲ್ಲಿಂದ ದಾಂಡೇಲಿ ಪೊಲೀಸರ ಸಹಾಯದಿಂದ ಹುಬ್ಬಳ್ಳಿಯ ಆಸ್ಪತ್ರೆ ಸೇರಿದ್ದಾಳೆ. ಆದ್ರೆ ಪೊಲೀಸರು ಕೇವಲ 3 ಜನರನ್ನ ಬಂಧಿಸಿದ್ದು ಉಳಿದ ಆರೋಪಿಗಳನ್ನ ಬಂಧಿಸಬೇಕು ಅಂತ ಗೀತಾ ಒತ್ತಾಯ ಮಾಡಿದ್ದಾಳೆ. ಅಲ್ಲದೆ ದಲಿತ ಪರ ಸಂಘಟನೆಗಳು ಸಹ ದಲಿತ ಮಹಿಳೆ ಪರ ಈಗಾಗಲೇ ಬೆನ್ನಿಗೆ ನಿಂತಿವೆ.

ಒಟ್ಟಾರೆ ಜೀವನ ಪೂರ್ತಿ ಜೊತೆಗಿರ್ತೀನಿ ಅಂದ ಪತಿಯೇ ಪತ್ನಿಯ ಜೀವಕ್ಕೆ ಕುತ್ತಾಗಿದ್ದು ಜಾತಿಗೆ ಇವರೆಲ್ಲ ಹೇಗೆ ಜೋತುಬಿದ್ದಿದ್ದಾರೆ ಅನ್ನೋದೇ ದುರಂತ.

-ಈರಣ್ಣ ವಾಲಿಕಾರ ಪಬ್ಲಿಕ್ ನೆಕ್ಸ್ಟ್,,,,

Edited By : Shivu K
Kshetra Samachara

Kshetra Samachara

05/10/2021 02:42 pm

Cinque Terre

53.34 K

Cinque Terre

13

ಸಂಬಂಧಿತ ಸುದ್ದಿ