ಹುಬ್ಬಳ್ಳಿ: ಕೊರೊನಾ ಸಂಕಷ್ಟ ಕಾಲದಲ್ಲಿ ಇದ್ದ ಹಲವು ಕಂಪನಿಗಳು ತಮ್ಮ ನೌಕರರನ್ನು ತೆಗೆದು ಹಾಕಿದ್ವು. ಕೆಲ್ಸ ಮಾಡ್ತಿದ್ದ ಯುವಕರಿಗೆ ಇದ್ದೊಂದು ಕೆಲಸವು ಇಲ್ಲದಾಗ ಆ ಒಂದು ಕಂಪನಿ ಹಣದ ಆಸೆ ತೋರಿಸಿತು. ನಿಮಗೆ ಕೆಲಸದ ಜೊತೆ ಲಕ್ಷ ಲಕ್ಷ ಹಣ ಮಾಡುವ ಬಗೆ ಹೇಳ್ತೀವಿ ಅಂತ ಅವರು ಮಾಡಿದ್ದೇನು ಗೊತ್ತಾ? ಈ ಸ್ಟೋರಿ ಓದಿ.
ಹೌದು. ಪಂಜಾಬ್ ಮೂಲದ ಐಟಿಎಂ ಕಂಪನಿ ಅನ್ನೋ ಹೆಸರಿನ ಉದ್ಯಮವನ್ನು ಕರ್ನಾಟದಲ್ಲಿ ಸಹ ತರಲಾಯಿತು. 2019ರಲ್ಲಿ ಆರಂಭವಾದ ಈ ಕಂಪನಿ, ರಾಜ್ಯದ ಒಟ್ಟು 6 ಪ್ರಮುಖ ಜಿಲ್ಲೆಗಳಲ್ಲಿ ತನ್ನ ಕಾರ್ಯವನ್ನ ಆರಂಭಿಸಿತ್ತು. ಚೈನ್ ಸಿಸ್ಟಮ್ ಮೂಲಕ ಜನರನ್ನು ಸೆಳೆದಿದ್ದ ಈ ಕಂಪನಿಗೆ ನಿರುದ್ಯೋಗಿ ಯುವಕರು ಸಹ ಹೆಚ್ಚೆಚ್ಚು ಸೇರಿಕೊಂಡು ಮೋಸ ಹೋಗಿದ್ದಾರೆ.
ಆರೋಪಿಗಳು ಒಟ್ಟು 6 ಪ್ರಮುಖ ನಗರಗಳಾದ ಹುಬ್ಬಳ್ಳಿ, ಬೆಳಗಾವಿ, ಬಾಗಲಕೋಟೆ, ಮೈಸೂರು, ಶಿವಮೊಗ್ಗ ಸೇರಿ ಬೆಂಗಳೂರಿನಲ್ಲಿ ಸಹ ಇವರು ತಮ್ಮ ಕಂಪನಿ ಆರಂಭಿಸಿದ್ದರು. ಕರ್ನಾಟಕದ ಹೆಡ್‌ಗಳಾಗಿ ಹೇಮಂತ್, ಮಧು, ಆರ್ ಹೇಮಂತ್ ಇವರೆಲ್ಲರೂ ಸಹ ಹಣ ಪಡೆದು ಸದ್ಯ ಪರಾರಿಯಾಗಿದ್ದಾರೆ ಎನ್ನುವ ಆರೋಪವಿದೆ. ಒಟ್ಟು 4 ಸಾವಿರ ಯುವಕರಿಗೆ ಕೆಲಸ ಕೊಟ್ಟಿದ್ದ ಈ ಕಂಪನಿ, ಯುವಕರಿಂದ 71 ಲಕ್ಷ ಹಣವನ್ನ ಪಡೆದಿದೆ. ಬರುಬರುತ್ತಾ ಹಣವನ್ನೇ ಕೊಡದೆ ಮೋಸಕ್ಕೆ ಜಾರಿತ್ತು. ಆಗ ಯುವಕರು ಹಣ ಕೇಳಿದ್ರೆ ಕೊಟ್ಟ ಹಣವನ್ನು ಕೊಡದೆ ಸತಾಯಿಸಿ ಇದೀಗ ಇದ್ದ ಜಾಗವನ್ನೇ ಖಾಲಿ ಮಾಡಿದ್ದಾರಂತೆ.
ಒಟ್ಟಾರೆ ಜನ ಮರುಳೋ ಜಾತ್ರೆ ಮರುಳೋ ಎನ್ನುವಂತಾಗಿದೆ ಹಣ ಕಳೆದುಕೊಂಡವರ ಸ್ಥಿತಿ. ಕೋಟಿ ಕೋಟಿ ಬಂಡವಾಳ ಹಾಕಿ ನಷ್ಟದಲ್ಲಿರುವ ಕಂಪನಿಗಳು ಅದೆಷ್ಟೋ ಜನರನ್ನ ಕೆಲಸದಿಂದ ಹೊರ ಹಾಕಿವೆ. ಇತ್ತ ಯುವಕರಿಂದಲೇ ಹಣ ಪಡೆದ ಗೋಲ್ಮಾಲ್ ಕಂಪನಿ ಸದ್ದಿಲ್ಲದೆ ಹಣ ಮಾಡಿಕೊಂಡು ಪರಾರಿಯಾಗಿದ್ದು ನಿಜಕ್ಕೂ ಇನ್ನಾದ್ರೂ ಜನ ಎಚ್ಚೆತ್ತುಕೊಳ್ಳಬೇಕಿದೆ.
ವರದಿ: ಈರಣ್ಣ ವಾಲಿಕಾರ
Kshetra Samachara
04/10/2021 03:46 pm