ಹುಬ್ಬಳ್ಳಿ- ಮನೆ ಬಾಡಿಗೆ ಪಡೆಯುವುದಾಗಿ ನಂಬಿಸಿ, ವ್ಯಕ್ತಿಯೊಬ್ಬರಿಂದ ಬ್ಯಾಂಕ್ ಖಾತೆಯ ಮಾಹಿತಿ ಪಡೆದು, 1,87,500 ರೂ . ವರ್ಗಾಯಿಸಿಕೊಂಡು ವಂಚಿಸಿರುವ ಕುರಿತು, ಹುಬ್ಬಳ್ಳಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲ್ಯಾಮಿಂಗ್ಟನ್ ರಸ್ತೆಯ ವಿಕ್ರಮ ಶಿರೂರ ವಂಚನೆಗೊಳಗಾದ ವ್ಯಕ್ತಿಯಾಗಿದ್ದು, ವಿಕ್ರಮ ಅವರು ಮಂಗಳೂರಿನ ತಮ್ಮ ಮನೆಯನ್ನು ಬಾಡಿಗೆಗೆ ಕೊಡಲೆಂದು, ಮ್ಯಾಜಿಕ್ ಬ್ರಿಕ್ಸ್ ವೆಬ್‌ಸೈಟ್'ನಲ್ಲಿ ಜಾಹೀರಾತು ನೀಡಿದ್ದರು. ಅದರಲ್ಲಿದ್ದ ಮೊಬೈಲ್ ಸಂಖ್ಯೆ ಪಡೆದು ಅಪರಿಚಿತನೊಬ್ಬ ಸೆ. 18 ರಂದು ಕರೆ ಮಾಡಿ ತಾನು ಸಿಐಎಸ್‌ಎಫ್‌ನಲ್ಲಿ ಪಿಎಸ್‌ಐ ಇದ್ದೇನೆ, ಅಹ್ಮದಾಬಾದ್‌ನಿಂದ ಮಂಗಳೂರಿಗೆ ವರ್ಗಾವಣೆಯಾಗಿದೆ ಎಂದು ನಂಬಿಸಿದ್ದ.
12,500 ರೂ.ಗೆ ಬಾಡಿಗೆಗೆ ಒಪ್ಪಿಸಿದ್ದ ಮುಂಗಡ ಹಣವನ್ನು ಆನ್ ಲೈನ್ ಮೂಲಕ ನೀಡುವುದಾಗಿ ಭೀಮ್ ಆ್ಯಪ್ ಹಾಗೂ ಇಂಟರ್‌ನೆಟ್ ಬ್ಯಾಂಕಿಂಗ್ ನ ಮಾಹಿತಿ ಪಡೆದಿದ್ದ. ಬಳಿಕ ಹೇಗೋ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆಂದು ದೂರು ಸಲ್ಲಿಸಲಾಗಿದೆ.
Kshetra Samachara
23/09/2021 01:02 pm