ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಗುಡಿಸಾಗರ ಗ್ರಾ.ಪಂ ನಲ್ಲಿ ಹಗರಣದ ಆರೋಪ; ಗ್ರಾ.ಪಂ ಗೆ ಬೀಗ

ನವಲಗುಂದ : ಅರೆರೆರೆ ಏನ್ರಿ ಇದು ಗ್ರಾಮ ಪಂಚಾಯತ್ ಬಾಗಿಲಿಗೆ ಬೀಗ ಹಾಕ್ಯಾರ ಅಲ್ರಿ, ಅಷ್ಟ ಅಲ್ಲದ ಗ್ರಾಮಸ್ಥರು ಗುಂಪು ಗುಂಪಾಗಿ ನಿಂತು ಏನೋ ಚರ್ಚೆ ಮಾಡಾಕತ್ತಾರ ಅಂತೀರೆನ್ರಿ, ಇದೆಲ್ಲಾ ಕಂಡು ಬಂದಿದ್ದ ನವಲಗುಂದ ತಾಲೂಕಿನ ಗುಡಿಸಾಗರ ಗ್ರಾಮ ಪಂಚಾಯತ್ಯಾಗ ನೋಡ್ರಿ...

ಈ ಗುಡಿಸಾಗರ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಗುಡಿಸಾಗರ, ಸೊಟಕನಾಳ, ಕಡದಳ್ಳಿ, ನಾಗನೂರು ಹಿಂಗ್ ನಾಲ್ಕು ಗ್ರಾಮಗಳು ಬರ್ತಾವ್ರಿ, ಇಂತಾ ದೊಡ್ಡ ಗ್ರಾಮ ಪಂಚಾಯತ್ ಮುಂದ ಇಷ್ಟೊಂದ ಮಂದಿ ನಿಂತಾರ ಅಂದ್ರ ಏನೋ ಆಗೇತಿ ಅನಸಲಾರ್ದ ಇರಲ್ಲಾ ಬಿಡ್ರಿ..

ಬರೀ ಅಲ್ಲೇ ಏನ್ ಆಗೇತಿ ಅಂತಾ ನಾವ್ ಹೇಳಂಗಿಲ್ಲ ರೀ ನೀವ, ಅಂತಾದ ಏನ ಆಗೇತಿ ಅಂತಾ ತಿಳ್ಕೊಳೋನೆನ್ರಿ ಹಂಗಾದ್ರ ಅದನ್ನ ನಾವ್ ಹೇಳೋದಿಲ್ಲಾ, ಗ್ರಾಮಸ್ಥರ ಹೇಳ್ತಾರ ಕೇಳ್ರಿ....

ಈ ಗ್ರಾಮ ಪಂಚಾಯತ್ ನಿಂದಾ ಎರಡ ಸಿಸಿ ರಸ್ತೆ ಕಾಮಗಾರಿಗೆ ಬಿಲ್ ಆಗೇತಿ ಅಂತಾ ಗ್ರಾಮಸ್ಥರೆ ಆರೋಪ ಮಾಡಾಕತ್ತಾರ್ರಿ, ರೊಕ್ಕಾನೂ ಬಿಡುಗಡೆ ಆಗೇತಂತ್ರಿ ಆದ್ರೂ ಕೆಲಸ ಮಾತ್ರಾ ಅರ್ಧಕ್ಕ ನಿಂತೇತಿ, ರೊಕ್ಕಾ ಎಲ್ಲಿ ಹೋಗೇತಿ ಅಂತ ಗ್ರಾಮಸ್ಥರ ಕೇಳಿದ್ರ ಇಲ್ಲಿನ ಪಿ ಡಿ ಓ ಗಾಗ್ಲಿ, ಅಧ್ಯಕ್ಷರಿಗಾಗ್ಲಿ ಮಾತ ಬರವಲ್ದ, ಇದರಿಂದ ರಸ್ತೆ ಇಲ್ದ ಗ್ರಾಮಸ್ಥರ ಬಾಳ ಸಮಸ್ಯೆಗೆ ಸಿಕ್ಕೊಂಡಾರ್,

ಇನ್ನ ಗ್ರಾಮಸ್ಥರು ಗ್ರಾಮ ಪಂಚಾಯತ್ ಗ ಶನಿವಾರ ಬೀಗ ಹಾಕೋದ ತಡಾ ಅರ್ಧ ಮರ್ಧ ಮಾಡಿದ್ದ ಕೆಲಸದ ಕಡೆ ಭಾನುವಾರ ಸಂಜೀಕ ಎರಡ ಟ್ರ್ಯಾಕ್ಟರ್ ಉಸಕ ಹಾಕ್ಯಾರಂತ, ಒಟ್ನಾಗ ಗುಡಿಸಾಗರ ಗ್ರಾಮ ಪಂಚಾಯತ್ ಯಿಂದ ಹಗರಣ ಆಗೇತಿ ಅನ್ನೋದು ಗುಡಿಸಾಗರ ಗ್ರಾಮಸ್ಥರ ಆರೋಪಿ ಇನ್ನ,

ಇದಕ್ಕ ಸಂಬಂಧ ಪಟ್ಟ ಅಧಿಕಾರಿಗಳು ಪ್ರಾಮಾಣಿಕ ತನಿಖೆ ಮಾಡಿದ್ರ ಏನ ವಿಷಯಾ ಅನ್ನೋದ ಹೊರಗ ಬರತೈತಿ ನೋಡ್ರಿ, ಇದಕ್ಕ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಅನ್ನೋದ ಕೂಡ ಗ್ರಾಮಸ್ತರ ಆಗ್ರಹ ಆಗೇತಿ....

ವರದಿಗಾರ ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ

Edited By : Shivu K
Kshetra Samachara

Kshetra Samachara

21/09/2021 03:29 pm

Cinque Terre

59.26 K

Cinque Terre

3

ಸಂಬಂಧಿತ ಸುದ್ದಿ