ಹುಬ್ಬಳ್ಳಿ: ತಾಲೂಕಿನ ನೂಲ್ವಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಘಟನೆ ನಡೆಯುವ ಮುನ್ನವೇ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಗೀತಾ ನಾಯಕ್ ತನ್ನ ಸಿಬ್ಬಂದಿಗಳಿಗೆ ನೀಡುತ್ತಿರುವ ಕಿರುಕುಳದ ಬಗ್ಗೆ ಸ್ವತಃ ಆಸ್ಪತ್ರೆ ಸಿಬ್ಬಂದಿಗಳೇ ಎಎಚ್ಓ, ಟಿಎಚ್ಓ ಗಮನಕ್ಕೆ ತಂದರೂ ಏನು ಪ್ರಯೋಜನ ಆಗಿಲ್ಲವಂತೆ.
ಮಾನ್ಯ ಜಿಲ್ಲಾಧಿಕಾರಿಗಳೇ, ಈ ಬಗ್ಗೆ ಅಲ್ಲಿನ ಸಿಬ್ಬಂದಿಗಳು ತಮ್ಮ ಮೇಲಾಧಿಕಾರಿಗಳಿಗಗೆ ಮನವಿ ಅರ್ಪಿಸಿದ ಈ ಪೋಟೋ ಒಮ್ಮೆ ಗಮನಿಸಿ. "ಸರ್ ನಮಗೆ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಗೀತಾ ನಾಯಕ್ ಅವರಿಂದ ತೊಂದರೆ ಇದೆ. ನಮಗೆ ಕರ್ತವ್ಯ ನಿರ್ವಹಿಸಲು ಆಗುತ್ತಿಲ್ಲ ಎಂದರೂ ಮೇಲಾಧಿಕಾರಿಗಳು ಗಪ್ ಚುಪ್ ಇದ್ದರಂತೆ ಅದೇ ಪರಿಸ್ಥಿತಿ ಇಂದು ಅಮಾಯಕ ಸಿಬ್ಬಂದಿಯೋರ್ವನ ಪ್ರಾಣಕ್ಕೆ ಸಂಚಕಾರ ತಂದಿದೆ.
ಸ್ಥಳೀಯ ಅಧಿಕಾರಿಗಳಿಂದ ತೊಂದರೆ ಎದುರಿಸಿದ ವಿಚಾರ ಎಎಚ್ಓ ಟಿಎಚ್ಓ ಗಮನಕ್ಕೆ ಬಂದರೂ ಇದುವರೆಗೂ ಕೈ ಕಟ್ಟಿ ಕುಳಿತಿರುವುದು ಸಿಬ್ಬಂದಿ ವಲಯ ಸೇರಿ ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ, ಇದರಲ್ಲದೆ ನೂಲ್ವಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 24*7 ಹೆರಿಗೆ ಸೌಲಭ್ಯವಿದ್ರೂ ಖಾಸಗಿ ಆಸ್ಪತ್ರೆಗೆ ಶಿಪಾರಸ್ಸು ಮಾಡಿ ಸಿಜರೀನ್ ಮಾಡಿಸುವಂತೆ ಒತ್ತಾಯ ಮಾಡುತ್ತಿದ್ರಂತೆ, ಇನ್ನೂ ಆಸ್ಪತ್ರೆಯಲ್ಲಿ ನಡೆವ ಪ್ರತಿ ಹೆರಿಗೆಗೂ 500, 1000 ಹಣ ವಸೂಲಿ ಮಾಡುತ್ತಿದ್ರೂ ಎಂಬ ಆರೋಪ ಸ್ಥಳೀಯರಿಂದ ಕೇಳಿ ಬಂದಿದೆ ಜೊತೆಗೆ ಸಿಬ್ಬಂದಿಗಳಿಗೆ ಕಿರುಕುಳದ ಬಗ್ಗೆ ವಿಷಯ ತಿಳಿದ್ರೂ ಮೇಲಾಧಿಕಾರಿಗಳು ಮೂಕವಾಗಿರೋದು ಇಂದು ಆತ್ಮಹತ್ಯೆಯಂತಹ ದುರ್ಘಟನೆಗೆ ಕಾರಣವಾಗಿದೆ.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ವೈದ್ಯಾಧಿಕಾರಿ ಡಾ.ಗೀತಾ ನಾಯಕ್ ಅವರನ್ನ ವಿಚಾರಣೆಗೆ ಒಳಪಡಿಸಬೇಕಿದೆ. ಹಾಗೂ ಸಂಬಂಧಪಟ್ಟ ಎಎಚ್ಓ ಟಿಎಚ್ಓ ಗಳನ್ನು ಕ್ರಮ ಕೈಗೊಳ್ಳದಿರುವ ಬಗ್ಗೆ ಪ್ರಶ್ನೆ ಮಾಡಬೇಕಿದೆ.
Kshetra Samachara
20/09/2021 05:09 pm