ನವಲಗುಂದ : ತಾಲೂಕಿನ ಗುಮ್ಮಗೋಳ ಗ್ರಾಮ ಸೇರಿದಂತೆ ಹಲವು ಗ್ರಾಮಗಳಲ್ಲಿ ನೆನ್ನೆ ತಡರಾತ್ರಿ ಕಳ್ಳರು ತಮ್ಮ ಕೈಚಳಕ ತೋರಿಸುವ ಮೂಲಕ ಸುಮಾರು ಇಪ್ಪತ್ತುಕ್ಕೂ ಹೆಚ್ಚು ಟ್ರ್ಯಾಕ್ಟರ್ ಗಳ ಬ್ಯಾಟರಿಗಳನ್ನು ಹೊತ್ತೋಯ್ದಿದ್ದಾರೆ ಎಂದು ತಿಳಿದುಬಂದಿದೆ.
ಹೌದು ಗುಮ್ಮಗೋಳ, ಶಿರೂರು, ಮೊರಬ, ಬ್ಯಾಲ್ಯಾಳ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ಟ್ರ್ಯಾಕ್ಟರ್ ಗಳ ಬ್ಯಾಟರಿಗಳನ್ನು ಹೊತ್ತೋಯ್ಯಲಾಗಿದೆ. ಇನ್ನು ಗುಮ್ಮಗೋಳ ಗ್ರಾಮದ ಬಸವರಾಜ ಹದ್ದನ್ನವರ, ದ್ಯಾಮಣ್ಣ ಜಾವೂರ್ ಎಂಬುವವರಿಗೆ ಸೇರಿದ ಟ್ರ್ಯಾಕ್ಟರ್ ಸೇರಿದಂತೆ ಕಾಮಗಾರಿಗಾಗಿ ಬಂದ ಟ್ರ್ಯಾಕ್ಟರ್ ನ ಬ್ಯಾಟರಿಯನ್ನು ಸಹ ಕದ್ದೊಯ್ದ ಘಟನೆ ನಡೆದಿದೆ ಎಂದು ತಿಳಿದು ಬಂದಿದ್ದು, ಘಟನೆ ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
Kshetra Samachara
18/09/2021 03:05 pm