ಕುಂದಗೋಳ: ಮನೆಯಲ್ಲಿ ಯಾರು ಇರದ ಸಮಯವನ್ನೇ ಗುರಿಯಾಗಿಸಿದ ಕಳ್ಳರು ಚಿನ್ನಾಭರಣ, ಹಣ ದೋಚಿ ಪರಾರಿಯಾಗಿರುವ ಘಟನೆ ಕುಂದಗೋಳ ಪಟ್ಟಣದ ರೇವಣಸಿದ್ಧೇಶ್ವರ ಪಾರ್ಕ್‌ನಲ್ಲಿ ನಡೆದಿದೆ.
ಪಟ್ಟಣದ ಮಾಣಿಕ್ಯ ಚಿಲ್ಲೂರ ಎಂಬುವವರ ಮನೆಗೆ ನುಗ್ಗಿದ ಕಳ್ಳರು 150 ಗ್ರಾಂ ತೂಕದ ಬೆಳ್ಳಿ ಚೈನ್, 60 ಗ್ರಾಂ ತೂಕದ ಚಿನ್ನದ ಒಡವೆ, ರಿಯಲ್ ಮಿ ಆಂಡ್ರಾಯ್ಡ್ ಸ್ಮಾರ್ಟ್ಫೋನ್, ಸ್ಯಾಮ್ ಸಂಗ್ ಕೀ ಪ್ಯಾಡ್ ಮೊಬೈಲ್ ಸೇರಿ 52,000 ರೂಪಾಯಿ ನಗದು ಹಣ ದೋಚಿದ್ದಾರೆ. ಈ ಕುರಿತು ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
Kshetra Samachara
13/09/2021 10:37 pm