ಹುಬ್ಬಳ್ಳಿ:ಎಲ್ಲರೂ ಗಣೇಶ ಮೂರ್ತಿ ಪ್ರತಿಷ್ಠಾಪನೆಯಲ್ಲಿ ತೊಡಗಿರುವಾಗ ಕಳ್ಳರು ತಮ್ಮ ಕೈಚಳಕ ತೋರಿಸಿರುವ ಘಟನೆ ಭವಾನಿ ನಗರದ ದೋಬಿ ಘಾಟ್ ನಲ್ಲಿ ನಡೆದಿದೆ.
ಹೌದು..ಆನಂದ ಪಾಟೀಲ ಎಂಬುವರ ಸೇರಿದ್ದ ಶ್ರೀಗಂಧದ ಮರವನ್ನು ಕದ್ದುಕೊಂಡು ಕಳ್ಳರು ಪರಾರಿಯಾಗಿದ್ದಾರೆ. ಆನಂದ ಪಾಟೀಲ ಅವರ ಮನೆ ಸೇರಿದಂತೆ ಸುತ್ತಮುತ್ತಲಿನ ಮನೆಗಳಿಗೆ ಹೊರಗಿನಿಂದ ಬಾಗಿಲುಗಳನ್ನು ಲಾಕ್ ಮಾಡಿದ್ದಾರೆ. ಎಂಟು ಜನರ ಕಳ್ಳರ ತಂಡ ಶ್ರೀಗಂಧದ ಮರವನ್ನು ಕಳ್ಳತನ ಮಾಡಿದ್ದು, ಅಕ್ಕಪಕ್ಕದ ಮನೆಯ ಮೇಲೆ ಕಲ್ಲುಗಳನ್ನು ಎಸೆದಿದ್ದಾರೆ. ಮಧ್ಯರಾತ್ರಿ ಈ ಘಟನೆ ನಡೆದಿದ್ದು ಕೆಲಹೊತ್ತು ಭಯದ ವಾತಾವರಣ ನಿರ್ಮಾಣವಾಗಿತ್ತು. ಆನಂದ ಪಾಟೀಲ ಅವರ ಮೇಲೆ ಕಳ್ಳರು ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಅಶೋಕ ನಗರದ ಪೊಲೀಸರು ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ.
Kshetra Samachara
11/09/2021 11:50 am