ಕಲಘಟಗಿ: ತಾಲೂಕಿನ ಬಮ್ಮಿಗಟ್ಟಿ ಗ್ರಾಮದ ಕೆವಿಜಿ ಬ್ಯಾಂಕ್ ದರೋಡೆ ಯತ್ನದಲ್ಲಿನ ಕಳ್ಳರ ಚಲನವಲನ ಸಿಸಿಟಿಯಲ್ಲಿ ಸರೆಯಾಗಿದೆ.
ಬ್ಯಾಂಕ್ ಹಿಂದಿನ ಕ್ಯಾಶ್ ಕ್ಯಾಬಿನ್ ಹತ್ತಿರದ ಗೋಡೆಯನ್ನು ಒಡೆದ ಅಪರಿಚಿತರು ದರೋಡೆ ಮಾಡಲು ಬ್ಯಾಂಕ್ ಒಳಗೆ ನುಗ್ಗಿ ತಡಕಾಡಿದ್ದಾರೆ.ಗ್ಯಾಸ್ ಕಟರ್ ಬಳಸಿ ಸೇಫ್ ಲಾಕರ್ ಮುರಿದು ಕಳ್ಳತನ ಮಾಡಲು ಯತ್ನಿಸಿದ್ದಾರೆ.
ಬ್ಯಾಂಕ್ ನಲ್ಲಿನ ಕಳ್ಳರ ಚಲನವಲನಗಳು ಸಿ ಸಿ ಟಿವಿಯಲ್ಲಿ ಸೆರೆಗಿವೆ.ನಂತರ ಕಳ್ಳರು ಸಿ ಸಿ ಟಿ ವಿ ಕಿತ್ತು ಹಾಕಿದ್ದಾರೆ.
ಈ ಕುರಿತು ಬ್ಯಾಂಕ್ ಮ್ಯಾನೇಜರ್ ಶರತ್ ನಾಯಕ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಜಿಲ್ಲಾಪೊಲೀಸ್ ಉಪವರಿಷ್ಠಾಧಿಕಾರಿ, ಬೆರಳಚ್ಚು ತಜ್ಞರು ಹಾಗೂ ಶ್ವಾನದಳ,ಸಿಪಿಐ ಪ್ರಭು ಸೂರಿನ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.
ಕೆಲ ತಿಂಗಳ ಹಿಂದೆ ಕಲಘಟಗಿಯಲ್ಲಿ ಹಾಡಹಗಲೇ ಮೂರು ಮನೆಗಳಲ್ಲಿ ಕಳ್ಳರು ಚಿನ್ನಾಭರಣ ದರೋಡೆ ಪ್ರಕರಣ ಮಾಸುವ ಮುನ್ನವೇ ಬ್ಯಾಂಕ್ ದರೋಡೆ ಯತ್ನ ಪ್ರಕರಣ ಜನರನ್ನು ಬೆಚ್ಚಿಬಿಳಿಸಿದೆ.
Kshetra Samachara
07/09/2021 09:57 am