ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಚಾಲಾಕಿ ಕಳ್ಳಿಯ ಹೆಡೆಮುರಿ ಕಟ್ಟಿದ ಪೊಲೀಸರು:11,39,000 ಮೌಲ್ಯದ ಚಿನ್ನಾಭರಣ ವಶಕ್ಕೆ

ಹುಬ್ಬಳ್ಳಿ: ಮನೆಯಲ್ಲಿ ಬಾಂಡೆ ತೊಳೆಯುವ ಕೆಲಸ ಮಾಡಿ ಜನರಿಗೆ ವಂಚಿಸುತ್ತಿದ್ದ ಚಾಲಾಕಿ ಕಳ್ಳಿಯನ್ನು ವಶಕ್ಕೆ ಪಡೆಯುವಲ್ಲಿ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಕಮೀಷನರೇಟ್ ನ ಪೊಲೀಸರು ಯಶಸ್ವಿಯಾಗಿದ್ದಾರೆ.

ಹೌದು.. ಚಾಲಾಕಿ ಕಳ್ಳಿಯನ್ನು ಹೆಡೆಮುರಿ ಕಟ್ಟುವಲ್ಲಿ ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದು,ಗಾಯತ್ರಿ ಸಂದೀಪ ಗಾಯಕವಾಡ (28) ಎಂಬುವವಳೇ ಬಂಧಿತ ಆರೋಪಿ. ಇನ್ನೂ ಬಂಧಿತ ಆರೋಪಿಯಿಂದ 11,39,000 ರೂಪಾಯಿ ಮೌಲ್ಯದ 250 ಗ್ರಾಂ ಬಂಗಾರದ ಆಭರಣ, ಒಂದು ಮೊಬೈಲ್ ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಹುಬ್ಬಳ್ಳಿ ಹಳೇ ಬಸ್‌ ನಿಲ್ದಾಣದ ಎದುರಿಗೆ ಇರುವ ಅಯೋದ್ಯಾ, ಹೋಟೆಲ ಮುಂದೆ ಜನವರಿ 04ರಂದು ಒಂದು ಸ್ಯಾಮ್‌ಸಂಗ್ ಕಂಪನಿಯ ಮೊಬೈಲ್ ಫೋನನ್ನು ಕಳ್ಳತನ ಮಾಡಿದ್ದು ಈ ಘಟನೆಯ ಉಪನಗರ ಠಾಣೆಯಲ್ಲಿ ದಾಖಲಾಗಿತ್ತು. ಪ್ರಕರಣವನ್ನು ಬೆನ್ನಟ್ಟಿದ ಪೊಲೀಸರು ಕಳ್ಳಿಯನ್ನು ಬಂಧಿಸಿ 250 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ ಒಂದು ಸ್ಯಾಮಸಂಗ ಕಂಪನಿಯ ಮೊಬೈಲ್ ವಶಕ್ಕೆ ಪಡೆದುಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇನ್ನೂ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದ ಉಪನಗರ ಪೊಲೀಸ ಠಾಣೆಯ ಪೊಲೀಸ ಇನ್ಸಪೆಕ್ಟರ್ ರವಿಚಂದ್ರ ಡಿ ಬಿ, ಪಿ ಎಸ್ ಐ (ಕಾವಸು) ಅಶೋಕ ಬಿ ಎಸ್.ಪಿ, ಸಿಬ್ಬಂಧಿಗಳಾದ ಯು.ಎಮ್. ಪಾಟೀಲ, ಎಸ್.ವಾಯ್. ಬಿಜಲಿ, ಸುನೀಲ್ ಪಾಂಡೆ, ಮಲ್ಲಿಕಾರ್ಜುನ ಧನಿಗೊಂಡ, ಮಂಜುನಾಥ ಯಕ್ಕಡಿ, ಮಂಜುನಾಥ ಹಾಲವರ, ರವಿ ಹೊಸಮನಿ, ರೇಣು ಸಿಕ್ಕಲಗೇರ, ಜಗದೀಶ ಹಟ್ಟಿ, ಕುಮಾರ ಬಾಗೆವಾಡಮಠ, ಮಾಬುಸಾಬ ಮುಲ್ಲಾ, ಆರೂಢ ಕರೆಣ್ಣವರ, ಮಹಿಳಾ ಸಿಬ್ಬಂದಿಗಳಾದ ಮಾರ್ಗರೇಟ ಅನಂತಪೂರ, ಸಂಗೀತಾ ಗೌಳಿ ಇವರ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

23/08/2021 04:47 pm

Cinque Terre

49.44 K

Cinque Terre

6

ಸಂಬಂಧಿತ ಸುದ್ದಿ