ಹುಬ್ಬಳ್ಳಿ: ಪರಿಚಯ ಇದ್ದರೂ ಕೂಡಾ ತನ್ನ ಅಂಗಡಿಯಲ್ಲಿ ಕೊತ್ತಂಬರಿ ಸೊಪ್ಪು ತೆಗೆದುಕೊಳ್ಳಲಿಲ್ಲವೆಂದು ಸಿಟ್ಟಾಗಿ ವ್ಯಾಪಾರಿ ವ್ಯಕ್ತಿ ಓರ್ವನಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ ಘಟನೆ ಹಳೇಹುಬ್ಬಳ್ಳಿ ಗೌಳಿ ಗಲ್ಲಿಯಲ್ಲಿ ನಡೆದಿದೆ.
ಹಳೇಹುಬ್ಬಳ್ಳಿ ಬಾಣತಿಕಟ್ಟಿ ಮೆಹಬೂಬನಗರದ ಮೊಹಮ್ಮದಗೌಸ ಬಿಜಾಪುರ ಗಾಯಗೊಂಡಿದ್ದು, ಅದೇ ಪ್ರದೇಶದ ಖಾದರ ಮತ್ತು ಇನ್ನೊಬ್ಬ ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ಕೊತ್ತಂಬರಿ ವ್ಯಾಪಾರ ಮಾಡಿಕೊಂಡಿರುವ ಖಾದರ ಬಳಿ ಮೊಹಮ್ಮದಗೌಸನು ಕಾಯಂ ಆಗಿ ವ್ಯಾಪಾರ ಮಾಡುತ್ತಿದ್ದನಂತೆ, ಎಂದಿನಂತೆ ಖರೀದಿಗೆ ಬಂದಾಗ, ಖಾದರ ಬಳಿ ಕೊತ್ತಂಬರಿ ಸರಿಯಿಲ್ಲವೆಂದು ಬೇರೆ ಕಡೆಗೆ ಹೋದಾಗ, ಸಿಟ್ಟಾದ ಖಾದರ ಜಗಳ ತೆಗೆದು ಅವಾಚ್ಯವಾಗಿ ನಿಂದಿಸಿದ್ದಲ್ಲದೆ, ತನ್ನ ಸಹಚರನೊಂದಿಗೆ ಚಾಕುವಿನಿಂದ ಮೊಹಮ್ಮದಗೌಸಗೆ ಎಲ್ಲೆಂದರಲ್ಲಿ ಇರಿದು ಗಾಯಗೊಳಿಸಿದ್ದಾನೆ. ಈ ಕುರಿತು ಹಳೇಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
16/08/2021 11:32 am