ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಎಸಿಪಿ ಅನುಷಾ ಮೇಲೆ ಸೀಮೆ ಎಣ್ಣೆ ಎರಚಿದ ವ್ಯಕ್ತಿ

ಧಾರವಾಡ: ಧಾರವಾಡದ ಸೂಪರ್ ಮಾರುಕಟ್ಟೆಯಲ್ಲಿ ಅನಧಿಕೃತ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ ವೇಳೆ ವ್ಯಕ್ತಿಯೊಬ್ಬ ಎಸಿಪಿ ಅನುಷಾ ಅವರ ಮೇಲೆಯೇ ಸೀಮೆ ಎಣ್ಣೆ ಎರಚಿರುವ ಘಟನೆ ನಡೆದಿದೆ.

ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಸಿಬ್ಬಂದಿ ಸೂಪರ್ ಮಾರುಕಟ್ಟೆಯಲ್ಲಿ ಅನಧಿಕೃತ ಅಂಗಡಿಗಳ ತೆರವು ಕಾರ್ಯಾಚರಣೆ ನಡೆಸಿದ್ದರು. ಇದಕ್ಕೆ ಪೊಲೀಸರು ಕೂಡ ಬಂದೋಬಸ್ತ್ ಮಾಡಿದ್ದರು. ಈ ವೇಳೆ ಅಂಗಡಿಗಳನ್ನು ತೆರವುಗೊಳಿಸದಂತೆ ಎಂ.ಎಂ.ಚೌಧರಿ ಎಂಬಾತ ತನ್ನ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಇದನ್ನು ಕಂಡ ಎಸಿಪಿ ಅನುಷಾ ಅದನ್ನು ತಡೆಯಲು ಮುಂದಾದರು. ಈ ವೇಳೆ ಆತ ಎಸಿಪಿ ಅವರ ಮೇಲೆಯೇ ಸೀಮೆ ಎಣ್ಣೆ ಎರಚಿ ಹುಚ್ಚಾಟ ಮೆರೆದಿದ್ದಾನೆ. ಇದೀಗ ಈ ವೀಡಿಯೋ ಭಾರಿ ವೈರಲ್ ಆಗಿದೆ.

Edited By : Shivu K
Kshetra Samachara

Kshetra Samachara

13/08/2021 12:41 pm

Cinque Terre

95.32 K

Cinque Terre

16

ಸಂಬಂಧಿತ ಸುದ್ದಿ