ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಒಂದೇ ದಿನ ಎರಡು ಮನೆಗಳ್ಳತನ! ಘಂಟಿಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಹುಬ್ಬಳ್ಳಿ- ಒಂದೇ ದಿನದಲ್ಲಿ ಎರಡು ಮನೆಗಳ್ಳತನ ಮಾಡಿ ಖಧೀಮರು ಪರಾರಿಯಾದ ಘಟನೆ, ನಗರದ ಘಂಟಿಕೇರಿ ಪೊಲೀಸ್ ಠಾಣೆ ವ್ಯಾಪ್ತಿಯ, ದೇಸಾಯಿ ಓಣಿ ಡೋರ ಗಲ್ಲಿಯಲ್ಲಿ ನಿನ್ನೆ ತಡರಾತ್ರಿಯಲ್ಲಿ ನಡೆದಿದೆ.

ಮಂಜುನಾಥ ಗವಡೆ ಎಂಬುವರ ಮನೆಯೇ ಕಳ್ಳತನವಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳರ ಪಾಲಾಗಿದೆ. ಕಳ್ಳರು ಚಿಲಕದ ಕೊಂಡಿ ಮುರಿದು, ಕೊಠಡಿಯಲ್ಲಿದ 6 ಗ್ರಾಂ ಚಿನ್ನಾಭರಣ, ಬೆಳ್ಳಿ ನಾಣ್ಯ ಸೇರಿ 25,500 ರೂಪಾಯಿ ಮೌಲ್ಯದ ಚಿನ್ನಾಭರಣ ನಗದು ಕದ್ದು ಪರಾರಿಯಾಗಿದ್ದಾರೆ. ಇನ್ನೂ ಇದೇ ಓಣಿಯ ಪಿ. ಶಾರದಾ ಎಂಬುವರ ಮನೆಯಲ್ಲಿ ಅವತ್ತೆ ರಾತ್ರಿ ಕಳ್ಳತನ ನಡೆದಿದೆ. ಮುಂಬಾಗಿಲ ಕೀಲಿ ಮುರಿದು ಬಾಗಿಲು ತೆಗೆದು ಒಳ ನುಗ್ಗಿದ ಕಳ್ಳರು, 59 ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ತೆಗೆದುಕೊಂಡು ಪರಾರಿಯಾಗಿದ್ದಾರೆ.

ಈ ಕುರಿತು ಘಂಟಿಕೇರಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆ ಕಾರ್ಯಾಚರಣೆ ಮುಂದುವರಿದಿದೆ‌.

Edited By : Nirmala Aralikatti
Kshetra Samachara

Kshetra Samachara

09/08/2021 12:02 pm

Cinque Terre

30.04 K

Cinque Terre

0

ಸಂಬಂಧಿತ ಸುದ್ದಿ