ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ ಈಗ ಕಳ್ಳರ ಹಾಟ್ ಸ್ಪಾಟ್, ಒಂದೇ ದಿನ ಮೂರಂಗಡಿ ಕಳ್ಳತನ

ಕುಂದಗೋಳ : ಪಟ್ಟಣದ ಮಾರ್ಕೇಟ್ ರಸ್ತೆಗೆ ಹೊಂದಿಕೊಂಡಿರುವ ಮೂರು ಅಂಗಡಿಗಳನ್ನು ರಾತ್ರೋರಾತ್ರಿ ಕಳ್ಳರು ಕೀಲಿ ಒಡೆದು ಕಳ್ಳತನ ಮಾಡಿದ ಘಟನೆ ಬುಧವಾರ ರಾತ್ರಿ ನಡೆದಿದೆ.

ಮಾರ್ಕೇಟ್ ರಸ್ತೆ ಮೂರಂಗಡಿ ಕ್ರಾಸ್'ನಲ್ಲಿರುವ ಮೊಬೈಲ್ ಸೆಂಟರ್ ಮಾಲೀಕರೇ ಹೇಳೋ ಪೈಕಿ 5 ಮೊಬೈಲ್, 7 ಸಾವಿರ ರೂಪಾಯಿ ನಗದು ಹಣ ಕಳ್ಳತನವಾಗಿದ್ದರೇ, ಅದೇ ರಸ್ತೆಯ ಬೂತೇಶ್ವರ ದೇವಸ್ಥಾನ ಪಕ್ಕದ ಅಂಗವಿಕಲನಿಗೆ ಸೇರಿದ ಡಬ್ಬಾ ಅಂಗಡಿ ಒಂದರಲ್ಲಿ ಸಿಗರೇಟ್ ಪ್ಯಾಕೆಟ್ ಸೇರಿ 2000 ನಗದು ಹಣ ಕಳ್ಳತವಾಗಿದ್ದು, ಪಕ್ಕದ ಎಲೆಕ್ಟ್ರಾನಿಕ್ ಶಾಪ್ ಗಲ್ಲಾ ಪೆಟ್ಟಿಗೆಯಲ್ಲಿನ ಟ್ಯಾಬ್ ಮೊಬೈಲ್ ಖದೀಮರ ಕೈ ಚಳಕಕ್ಕೆ ಎಕ್ಸೇಪ್ ಆಗಿದೆ.

ಏಕಕಾಲಕ್ಕೆ ಮೂರು ಅಂಗಡಿ ಕಳ್ಳತನದ ಪ್ರಕರಣ ಇಡೀ ಮಾರ್ಕೇಟ್ ವ್ಯಾಪಾರಸ್ಥರು ಸೇರಿ ಜನರಲ್ಲೂ ಆತಂಕದ ಛಾಯೆ ಆವರಿಸಿದ್ದು, ಕಳ್ಳರ ಕಾಟಕ್ಕೆ ಸೂಕ್ತ ಪೊಲೀಸ್ ಕಾರ್ಯಾಚರಣೆ ಹಾಗೂ ಸಂಪೂರ್ಣ ಮಾರ್ಕೇಟ್ ಸುತ್ತ ಮುತ್ತ ಸಿಸಿ ಕ್ಯಾಮರಾ ಅಳವಡಿಸುವಂತೆ ಜನರು ಮನವಿ ಮಾಡಿದ್ದು, ಕಳ್ಳತನದ ಪ್ರಕರಣಗಳ ಬಗ್ಗೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಗಮನಿಸುವಂತೆ ಜನ ಒತ್ತಾಯಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

05/08/2021 03:03 pm

Cinque Terre

43.82 K

Cinque Terre

2

ಸಂಬಂಧಿತ ಸುದ್ದಿ