ಧಾರವಾಡ: ಧಾರವಾಡದಲ್ಲಿ ಉದ್ಯಮಿಯೊಬ್ಬರನ್ನು ಹಾಡಹಗಲೇ ಅಪಹರಣ ಮಾಡಲಾಗಿದ್ದು, ದೂರು ದಾಖಲಾದ ನಾಲ್ಕೇ ಗಂಟೆಯಲ್ಲಿ ಪೊಲೀಸರು ಆ ಉದ್ಯಮಿಯನ್ನು ಪತ್ತೆ ಮಾಡಿರುವ ಘಟನೆ ನಡೆದಿದೆ.
ರಿಯಲ್ ಎಸ್ಟೇಟ್ ಉದ್ಯಮಿ ಶ್ರೀನಿವಾಸ ನಾಯ್ಡು ಅಪಹರಣಕ್ಕೊಳಗಾಗಿದ್ದ ಉದ್ಯಮಿಯಾಗಿದ್ದು, ಧಾರವಾಡ ತಾಲೂಕಿನ ದೇವರ ಹುಬ್ಬಳ್ಳಿ ಗ್ರಾಮದ ಬಳಿ ಇವರನ್ನು ವಿದ್ಯಾಗಿರಿ ಠಾಣೆ ಪೊಲೀಸರು ಪತ್ತೆ ಮಾಡಿದ್ದಾರೆ.
ಪೊಲೀಸರು ಅಪಹರಣಕಾರರನ್ನು ಬೆನ್ನು ಹತ್ತಿದ್ದರ ಪರಿಣಾಮ ಅಪಹರಣಾಕಾರರು ಉದ್ಯಮಿಯನ್ನು ಅರ್ಧ ದಾರಿಯಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಜಮೀನು ನೋಡಲು ಹೋದಾಗ ಈ ಅಪಹರಣ ನಡೆದಿದೆ ಎನ್ನಲಾಗಿದ್ದು, ಉದ್ಯಮಿಗೆ
ಖಾರದ ಪುಡಿ ಎರಚಿ ಅಪಹರಣ ಮಾಡಲಾಗಿತ್ತು. ಸದ್ಯ ಶ್ರೀನಿವಾಸ ಅವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಅಪಹರಣಾಕಾರರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
Kshetra Samachara
30/07/2021 07:48 pm