ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಮಲ್ಲಮ್ಮ, ಗೌರಿಗೆ ಬುಲಾವ್ ನೀಡಿದ ಸಿಬಿಐ

ಧಾರವಾಡ: ಯೋಗೀಶಗೌಡ ಗೌಡರ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ದಿನಕ್ಕೊಂದು ಬಾರಿ ಹೊಸ ಧಿಕ್ಕಿನಲ್ಲಿ ವಿಚಾರಣೆ ನಡೆಸುತ್ತಲೇ ಇದೆ.

ಮೊನ್ನೆಯಷ್ಟೇ ವಿನಯ್ ಕುಲಕರ್ಣಿ ಅವರು ಧಾರವಾಡಕ್ಕೆ ಬಂದು ಹೋದ ನಂತರ ನಿನ್ನೆ ಸಂಜೆ ಬಸವರಾಜ ಮುತ್ತಗಿ, ಶಿವಾನಂದ ಕರಿಗಾರ ಹಾಗೂ ಮಲ್ಲಮ್ಮ ಗೌಡರ ಅವರನ್ನು ಕರೆಯಿಸಿ ವಿಚಾರಣೆ ನಡೆಸಿದ್ದ ಸಿಬಿಐ, ಇಂದು ಮತ್ತೆ ಯೋಗೀಶಗೌಡ ಪತ್ನಿ ಮಲ್ಲಮ್ಮ ಹಾಗೂ ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ ಅವರಿಗೆ ಬುಲಾವ್ ನೀಡಿದೆ.

ಧಾರವಾಡದ ಉಪನಗರ ಪೊಲೀಸ್ ಠಾಣೆಗೆ ಇಬ್ಬರನ್ನೂ ಕರೆಯಿಸಿಕೊಂಡ ಸಿಬಿಐ ಅಧಿಕಾರಿಗಳು, ಕೆಲ ಹೊತ್ತು ಅವರನ್ನು ತೀವ್ರ ವಿಚಾರಣೆಗೊಳಪಡಿಸಿದರು. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಹಲವರನ್ನು ಸಿಬಿಐ ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ.

Edited By : Manjunath H D
Kshetra Samachara

Kshetra Samachara

29/07/2021 04:25 pm

Cinque Terre

61.42 K

Cinque Terre

11

ಸಂಬಂಧಿತ ಸುದ್ದಿ