ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಚಾಲಾಕಿ ಕಳ್ಳಿಯರ ಹೆಡೆಮುರಿಕಟ್ಟಿದ ಶಹರ ಠಾಣೆ ಪೊಲೀಸರು

ಹುಬ್ಬಳ್ಳಿ: ಅವಳಿನಗರದ ಜನರಿಗೆ ವಂಚಿಸುತ್ತಿದ್ದ ಮಹಿಳಾ ಚಾಲಾಕಿ ಕಳ್ಳರನ್ನು ಹೆಡೆಮುರಿ ಕಟ್ಟುವಲ್ಲಿ ಶಹರ ಪೊಲೀಸ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಎಲ್ಲೆಂದರಲ್ಲಿ ಕಿಸೆಕಳ್ಳತನ ,ಬಸ್‍ಗಳಲ್ಲಿ ಬ್ಯಾಗ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಮಹಿಳಾ ಕಳ್ಳಿಯರ ಜಾಲವನ್ನು ಹುಬ್ಬಳ್ಳಿಯ ಶಹರ ಠಾಣೆ ಪೊಲೀಸರು ಭೇದಿಸಿದ್ದಾರೆ. ಈ ಕುರಿತು ಕಾರ್ಯಾಚರಣೆ ಮಾಡಿದ ಪೊಲೀಸರು ಐದು ಜನ ಮಹಿಳಾ ಆರೋಪಗಳನ್ನು ಬಂಧನ ಮಾಡಿದ್ದಾರೆ.

ಪಲ್ಲವಿ ಚಂದ್ರಶೇಖರ ಭಜಂತ್ರಿ, ಆಸ್ಮಾ ಮಹ್ಮದರಫೀಕ ಗದಗ, ಕೊಳದವ್ವ ಕೊಳಲಿ ತವರಗೊಪ್ಪ, ಯಲ್ಲಮ್ಮ ಬಸವರಾಜ ಕೊಟುಗಣಿಸಿ, ಪ್ರೇಮಾ ಅಣ್ಣಪ್ಪ ಭಜಂತ್ರಿ ಎಂಬುವವರೆ ಬಂಧಿತ ಆರೋಪಿಗಳು. 20 ಗ್ರಾಂ ಬಂಗಾರದ ಸರ, 1ಗ್ರಾಂ ಬಂಗಾರದ 16 1,860 ರೂ.ನಗದು ವಶಕ್ಕೆ ಪಡೆದುಕೊಳ್ಳಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

01/03/2021 11:31 pm

Cinque Terre

51.03 K

Cinque Terre

8

ಸಂಬಂಧಿತ ಸುದ್ದಿ