ಹುಬ್ಬಳ್ಳಿ:ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನ ಮೇಲೆ ಚಾಕು ಇರಿತವಾಗಿರುವ ಘಟನೆ ಹುಬ್ಬಳ್ಳಿಯ ಉಣಕಲ್ ನಲ್ಲಿ ನಡೆದಿದೆ.
ಹನುಮಂತ ಎಂಬುವಂತ ವ್ಯಕ್ತಿಯೇ ನಿಂಗಪ್ಪ ಎಂಬ ವ್ಯಕ್ತಿಗೆ ಚಾಕು ಹಾಕಿದ್ದಾನೆ.ಹುಬ್ಬಳ್ಳಿಯ ಉಣಕಲ್ ಗ್ರಾಮದ ಛಲವಾದಿ ಓಣಿಯ ಹನುಮಂತ ಎನ್ನುವ ವ್ಯಕ್ತಿ ಕಳೆದ ಹತ್ತು ವರ್ಷಗಳ ಹಿಂದೆಯೇ ಪತ್ನಿ ಮಕ್ಕಳನ್ನು ತೊರೆದು ಮನೆ ಬಿಟ್ಟು ಹೋಗಿದ್ದ. ಹೀಗಾಗಿ ಪತಿಯನ್ನ ಹುಡುಕಿ ಹುಡುಕಿ ಸಾಕಾಗಿ ಹೋದ ಪತ್ನಿ ಮಂಜುಳಾ ಕಳೆದ ಹಲವು ವರ್ಷಗಳಿಂದ ನಿಂಗಪ್ಪ ಎನ್ನುವ ವ್ಯಕ್ತಿಯ ಜೊತೆ ಸಂಸಾರ ನಡೆಸುತ್ತಿದ್ದಳು.
ಹೆಂಡತಿ ಜೊತೆಗೆ ಸಂಸಾರ ಮಾಡುತ್ತಿದ್ದ ನಿಂಗಪ್ಪನಿಗೆ ಮಂಜುಳಾನ ಮೊದಲ ಪತಿ ಹನುಮಂತ ಚಾಕು ಹಾಕಿದ್ದಾನೆ.ಸದ್ಯ ಗಂಭೀರವಾಗಿ ಗಾಯಗೊಂಡ ನಿಂಗಪ್ಪ ಕಿಮ್ಸ್ ಗೆ ದಾಖಲಿಸಿದ್ದು,ಚಿಕಿತ್ಸೆ ನೀಡಲಾಗುತ್ತಿದೆ.ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹನುಮಂತ ಹೆಂಡತಿ ಬಿಟ್ಟು ಹೋಗಿ ಹತ್ತು ವರ್ಷಗಳಾಗಿತ್ತು. ಹೆಂಡತಿ ಬಿಟ್ಟು ಹೋಗಿ ಮರಳಿ ಮತ್ತೆ ಬಂದಾಗ ಪತ್ನಿ ಬೇರೆಯವನ ಜೊತೆ ಸಂಸಾರ ನಡೆಸುತ್ತಿದ್ದಳು. ಪತ್ನಿ ಬೇರೆಯವನ ಜೊತೆ ಇರುವುದನ್ನ ಕಂಡು ಮೊದಲ ಪತಿ ಪತ್ನಿಯ ಜೊತೆಗಿದ್ದ ವ್ಯಕ್ತಿಗೆ ಚಾಕು ಇರಿದು ಕೊಲೆ ಮಾಡಲು ಯತ್ನಿಸಿ ಪರಾರಿಯಾಗಿದ್ದಾನೆ. ಪರಾರಿಯಾಗಿರುವ ಮೊದಲ ಪತಿ ಹನುಮಂತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
Kshetra Samachara
01/03/2021 04:03 pm