ಕುಂದಗೋಳ : ಮನೆ ಕಟ್ಟಡ ನಿರ್ಮಾಣದ ಜಾಗದ ಸಲುವಾಗಿ ಅಕ್ಕಪಕ್ಕದ ಮನೆಯವರ ಜೊತೆ ನಡೆದ ಜಗಳವೊಂದು ಕೊಲೆಯಲ್ಲಿ ಅಂತ್ಯವಾದ ಘಟನೆ ಕುಂದಗೋಳ ತಾಲೂಕಿನ ಕಡಪಟ್ಟಿ ಗ್ರಾಮದಲ್ಲಿ ನಡೆದಿದೆ.
ಶ್ರೀಶೈಲಪ್ಪ ಬಳಿಗಾರ ಹಾಗೂ ಶಂಕ್ರಪ್ಪ ಬೂದಿಹಾಳ ಎಂಬುವವರ ನಡುವೆ ಕಳೆದ ದಿನಗಳಿಂದ ಆಗಾಗ ಕಟ್ಟಡ ನಿರ್ಮಾಣದ ಸಲುವಾಗಿ ಜಗಳ ಏರ್ಪಾಡುತ್ತಿತ್ತು. ಆ ಜಗಳವೇ ನಿನ್ನೆಯ ದಿನ ಅತಿರೇಕಕ್ಕೆ ತಿರುಗಿ ಕೋಲು, ದೊಣ್ಣೆ, ಕಲ್ಲುಗಳಿಂದ ಪರಸ್ಪರ ಕುಟುಂಬಸ್ಥರು ಹೊಡೆದಾಡಿ ಗಾಯ ಮಾಡಿಕೊಂಡಿದ್ದಾರೆ.
ಈ ಜಗಳದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಶ್ರೀಶೈಲಪ್ಪ ಬಳಿಗಾರ ಎಂಬುವವರನ್ನು ನಿನ್ನೆ ಆಂಬ್ಯುಲೆನ್ಸ್ ಮೂಲಕ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಸಾವನ್ನಪ್ಪಿದ್ದಾರೆ.
ಈ ಕುರಿತು ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಎರಡು ಕುಟುಂಬಸ್ಥರ ಜಗಳದ ವಿಚಾರಣೆ ನಡೆಯುತ್ತಿದೆ.
Kshetra Samachara
23/02/2021 04:45 pm