ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ತೋಳ ಬಂತು ತೋಳ ಎಂಬಂತಾಯ್ತು ಕಳ್ಳರ ಹಾವಳಿ

ಧಾರವಾಡ: ಕಳ್ಳರು ಬಂದಿದ್ದಾರೆ ಎಂಬ ಸುಳ್ಳು ಸುದ್ದಿ ಹಬ್ಬಿದ್ದರಿಂದ ಧಾರವಾಡದ ಮದಿಹಾಳದಲ್ಲಿ ತಡರಾತ್ರಿ ಜನ ಗುಂಪು ಗುಂಪಾಗಿ ಸೇರಿದ ಘಟನೆ ನಡೆದಿದೆ.

ಮೊನ್ನೆಯಷ್ಟೆ ಧಾರವಾಡದ ಕೆಲವು ಕಡೆಗಳಲ್ಲಿ ಕಳ್ಳತನವಾಗಿತ್ತು. ಅಲ್ಲದೇ ಕಳ್ಳರು ಗುಂಪು ಗುಂಪಾಗಿ ಅಲೆದಾಡಿದ್ದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದನ್ನು ಕಂಡು ಜನ ಭಯಭೀತಗೊಂಡಿದ್ದಾರೆ.

ನಿನ್ನೆ ತಡರಾತ್ರಿ ಮದಿಹಾಳದಲ್ಲಿ ಕಳ್ಳರು ಬಂದಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿದ್ದರಿಂದ ತಡರಾತ್ರಿ ಮನೆಯಿಂದ ಹೊರಬಂದ ಸಾರ್ವಜನಿಕರು ಗುಂಪು ಗುಂಪಾಗಿ ಸೇರಿ ಕಳ್ಳರ ಶೋಧ ನಡೆಸಿದ್ದಾರೆ. ಈ ವಿಷಯ ತಿಳಿದ ಕೂಡಲೇ ಶಹರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ಕೂಡ ನೀಡಿದ್ದರು.

Edited By : Nagesh Gaonkar
Kshetra Samachara

Kshetra Samachara

23/02/2021 10:22 am

Cinque Terre

78.97 K

Cinque Terre

1

ಸಂಬಂಧಿತ ಸುದ್ದಿ