ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೋಟಲ್ ಗಳಲ್ಲಿ ಅಕ್ರಮ ಮದ್ಯ ಮಾರಾಟ:ಅಬಕಾರಿ ಇಲಾಖೆ ಅಧಿಕಾರಿಗಳಿಂದ ದಾಳಿ : ಪ್ರಕರಣ ದಾಖಲು

ಹುಬ್ಬಳ್ಳಿ: ಹುಬ್ಬಳ್ಳಿ ನಗರದ ಹಲವು ಹೋಟೆಲ್ ಹಾಗೂ ಖಾನಾವಳಿಗಳಲ್ಲಿ ಗ್ರಾಹಕರಿಗೆ ಅಕ್ರಮ ಮದ್ಯ ಸರಬರಾಜು ಹಾಗೂ ಸೇವನೆ ಅವಕಾಶ ನೀಡುತ್ತಿರುವ ಖಚಿತ ಮಾಹಿತಿ ಹಿನ್ನಲೆಯಲ್ಲಿ, ಅಬಕಾರಿ ಇಲಾಖೆ ಅಧಿಕಾರಿಗಳು ಫೆ.21 ರಂದು ಹಲವು ಹೋಟೆಲ್ ಮೇಲೆ ದಾಳಿ ನಡೆಸಿ, ತಪಾಸಣೆ ಕೈಗೊಂಡು ಪ್ರಕರಣ ದಾಖಲಿಸಿದ್ದಾರೆ.

ಭೈರಿದೇವರಕೊಪ್ಪದ ಶರಣಪ್ಪ ಮಾಂಸದ ಹೋಟೆಲ್, ವಿದ್ಯಾನಗರದ ರೇಣುಕಾ‌ ಹಾಗೂ ದುರ್ಗಾ ಸಾವಜಿ ಹೋಟೆಲ್, ವಿನ್ಟೇಜ್ ರೆಸ್ಟೋರೆಂಟ್, ನ್ಯೂಕಾಟನ್ ಮಾರುಕಟ್ಟೆ ಬಳಿಯ ಕಾಮತ್ ಫಿಶ್ ಲ್ಯಾಂಡ್, ಜೈ ಶ್ರೀ ಗಾಳಿದುರ್ಗ ಹೋಟೆಲ್, ನೆಹರು ಮೈದಾನದ ಬಳಿಯ ಸಾಗರ ಪ್ಯಾಲೇಸ್, ವಿಕ್ಟೋರಿಯಾ ರಸ್ತೆಯ ನ್ಯೂ ಆರಾಧನೆ, ರೇಣುಕಾ ಸಾವಜಿ ಹೋಟೆಲ್, ಕಮರಿಪೇಟೆಯ ಜಗದಾಂಬ, ಪೆಂಡಾರ ಓಣಿಯ ದೇವಿಕಾ, ಅಂಚಟಗೇರಿಯ ಕಿರಣ್, ಜಗದಾಂಬಾ, ರೇಣುಕಾ ಸಾವಜಿ ಖಾನಾವಳಿಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಲಾಗಿದೆ. ನಿಯಮ ಉಲಂಘನೆಯ ಕಂಡು ಬಂದಡೆ ಅಬಕಾರಿ ಕಾಯ್ದೆ ಕಲಂ 15(ಎ) ರಡಿ ಮೂರು ಪ್ರಕರಣಗಳನ್ನು ದಾಖಲಿಸಲಾಗಿದೆ.

ದಾಳಿಯಲ್ಲಿ ಅಬಕಾರಿ ನಿರೀಕ್ಷಕ ಸಂಜೀವ್ ರೆಡ್ಡಿ, ಉಪ ನಿರೀಕ್ಷಕರುಗಳಾದ ದತ್ತಗುರು ಅಥಣಿ, ಬಾಬಾಸಾಬ ಲಡಗಿ, ಮಂಜುನಾಥ ಹಿರೇನಾಯ್ಕರ್ ಸೇರಿದಂತೆ ಅಬಕಾರಿ ರಕ್ಷಕರು ಭಾಗವಹಿಸಿದ್ದರು.

Edited By : Nirmala Aralikatti
Kshetra Samachara

Kshetra Samachara

22/02/2021 04:44 pm

Cinque Terre

36.43 K

Cinque Terre

0

ಸಂಬಂಧಿತ ಸುದ್ದಿ