ನವಲಗುಂದ : ತಾಲೂಕಿನ ಅಳಗವಾಡಿ ಗ್ರಾಮದಲ್ಲಿ ಸಾಲಬಾದೆ ತಾಳಲಾರದೇ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಗ್ರಾಮದ ದ್ಯಾಮವ್ವನ ಗುಡಿ ಓಣಿಯ 37 ವಯಸ್ಸಿನ ಯಲ್ಲಪ್ಪ ಹನುಮಪ್ಪ ಬಸಿಡೋಣಿ ಎಂಬ ರೈತನೇ ಸಾಲಬಾದೆಗೆ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನು ಅಳಗವಾಡಿ ಗ್ರಾಮದ ಪ್ರಾಥಮಿಕ ಸಹಕಾರಿ ಕೃಷಿ ಪತ್ತಿನ ಸಂಘದಲ್ಲಿ ಒಂದು ಲಕ್ಷ ಬೆಳೆಸಾಲ ಮತ್ತು ಗಡದೇಶ್ವರ ಮಹಿಳಾ ಸ್ವಸಹಾಯ ಗುಂಪಿನಲ್ಲಿ ಹೆಂಡತಿ ಹೆಸರಿನಲ್ಲಿ ಇಪ್ಪತ್ತು ಸಾವಿರ ಸಾಲ ಮಾಡಿಕೊಂಡಿದ್ದು, ಬೆಳೆ ಸರಿಯಾಗಿ ಬಾರದೆ ಹೊದ್ದರಿಂದ ಈ ರೀತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಈ ಹಿನ್ನಲೆ ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
20/02/2021 09:53 am