ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಛೋಟಾ ಮುಂಬೈನಲ್ಲಿ ಬೇರು ಬಿಟ್ಟಿದೆಯಾ ಬಿಟ್ ಕಾಯಿನ್ ದಂಧೆ..!

ಹುಬ್ಬಳ್ಳಿ : ಅವರೆಲ್ಲಾ ಶ್ರೀಮಂತ ಉಧ್ಯಮಿಗಳು ವ್ಯಾಪರಸ್ಥರು ಕಂಡರೆ ಸಾಕು ಬಣ್ಣ ಬಣ್ಣದ ಮಾತುಗಳು ಹೇಳಿ ಮರಳು ಮಾಡುತಿದ್ದರು. ಬಿಟ್ ಕಾಯಿನ್ ಮೇಲೆ ಇನ್ವೇಸ್ಟ್ ಮಾಡಿ ಲಕ್ಷ ಲಕ್ಷ ಲಾಭ ಮಾಡಬಹುದು ಎಂದು ಬ್ರೈನ್ ವಾಷ್ ಮಾಡುತಿದ್ದರು. ಅವರ ಬಣ್ಣ ಬಣ್ಣದ ಮಾತಿನ ಮೋಡಿಗೆ ಮರುಳಾಗಿ ಹುಬ್ಬಳ್ಳಿ ಉಧ್ಯಮಿ ಸಧ್ಯ ಲಕ್ಷ ಲಕ್ಷ ಹಣ ಕಳೆದು ಕೊಂಡಿದ್ದಾರೆ. ಹಾಗಿದ್ದರೆ ಬನ್ನಿ ಛೋಟಾ ಮುಂಬಯಿನಲ್ಲಿ ನಡೆಯುತ್ತಿರುವ ಆ ಧಂಧೆ ಯಾವುದು...ಅಷ್ಟಕ್ಕೂ ಈ ಬಿಟ್ ಕಾಯಿನ್ ಅಂದರೆ ಏನು ಎನ್ನುವುದನ್ನು ತೋರಿಸ್ತಿವಿ.......

ಸಧ್ಯ ಮಾತು ಎತ್ತಿದರೇ ಸಾಕು ಎಲ್ಲದಕ್ಕೂ ಡಿಜಿಟಲ್ ಆಗಿರಬೇಕು ಇದು ಡಿಜಿಟಲ್ ದುನಿಯಾ ಅಂತಾರೆ. ಅದೇ ಡಿಜಿಟಲ್ ಪದವೇ ಹುಬ್ಬಳ್ಳಿಯ ಉಧ್ಯಮಿಗೆ ಲಕ್ಷ ಲಕ್ಷ ಪಂಗನಾಮ ಹಾಕಿದೆ. ಹೌದು ಪಾಶ್ಚಾತ್ಯ ದೇಶಗಳಲ್ಲಿ ಬಹಳ ಫೇಮಸ್ ಆಗಿರೋ ಈ ಡಿಜಿಟಲ್ ಕರೆನ್ಸಿ, ಅರ್ಥಾತ್ ಬಿಟ್ ಕಾಯಿನ್ ಸಧ್ಯ ಛೋಟಾ ಮುಂಬಯಿ ಹುಬ್ಬಳ್ಳಿಗೂ ವಕ್ಕರಿಸಿದೆ.

ಅದೇ ಬಿಟ್ ಕಾಯಿನ್ ದಂಧೆಗೆ ಈ ವ್ಯಕ್ತಿ ಬರೋಬ್ಬರಿ 45 ಲಕ್ಷ ಹಣ ಕಳೆದುಕೊಂಡಿದ್ದಾನೆ. ಹುಬ್ಬಳ್ಳಿಯ ತೊರವಿಹಕ್ಕಲ ನಿವಾಸಿ ವಾಸಪ್ಪ ಲೋಕಪ್ಪ ಎನ್ನುವವರೇ ಸಧ್ಯ ಈ ಬಿಟ್ ಕಾಯಿನ್ ದಂಧೆಗೆ ಬಲಿಯಾಗಿರುವುದು. ದೆಹಲಿ ಮೂಲದ ಅಮಿತ್ ಭಾರದ್ವಾಜ್,ಅಜಯ್ ಭಾರದ್ವಾಜ್ ಸೇರಿದಂತೆ ಐವರು ಸೈಬರ್ ಖದೀಮರು ಸಧ್ಯ ಹುಬ್ಬಳ್ಳಿಯಲ್ಲಿ ದೊಡ್ಡ ಮಟ್ಟದ ದಂಧೆ ನಡೆಸಿದ್ದಾರೆ. ಸ್ಥಳೀಯ ವ್ಯಕ್ತಿ ಚೇತನ್ ಪಾಟೀಲ್ ಎನ್ನುವವರನ್ನು ಏಜೆಂಟ್ ಮಾಡಿಕೊಂಡ ಈ ಗ್ಯಾಂಗ್ ಅವಳಿ ನಗರದ ಪ್ರಸಿದ್ಧ ಉದ್ಯಮಿಗಳನ್ನು ಹೈಪೈ ಹೋಟೆಲ್ ಗೆ ಕರೆಯಿಸಿ ಗ್ರ್ಯಾಂಡ್ ಸೆಮಿನಾರ್ ಮಾಡಿತ್ತು.

ಅಲ್ಲದೆ ಅಮಿತಾಬ್ ಬಚ್ಚನ್,ರತನ್ ಟಾಟಾ ಅವರೇ ಬಿಟ್ ಕಾಯಿನ್ ಮೇಲೆ ಇನ್ವೇಸ್ಟ್ ಮಾಡಿ ಕೋಟಿ ಕೋಟಿ ಗಳಿಸಿದ್ದಾರೆ ಎಂದು ಬ್ರೈನ್ ವಾಶ್ ಮಾಡಿತ್ತಂತೆ.ಅದನ್ನು ನಂಬಿದ್ದ ಈ ಉದ್ಯಮಿ ಚೇತನ್ ಮೂಲಕ 45 ಲಕ್ಷ ಕೊಟ್ಟು ಬಿಟ್ ಕಾಯಿನ ಖರೀದಿ ಮಾಡಿದ್ದ. ಆದರೆ ಇತ್ತ ಕಾಯಿನ್ ಇಲ್ಲದೇ ತಮ್ಮ ಹಣವೂ ಇಲ್ಲದೇ ಸಧ್ಯ ಪೊಲೀಸ್ ಠಾಣೆಯ ಮೆಟ್ಟಿಲೆರುವಂತವಾಗಿದೆ.

2017 ರಲ್ಲಿ ಸೆಮಿನಾರ್ ನಲ್ಲಿ ಭಾಗವಹಿಸಿ 45 ಲಕ್ಷ ಹಾಕಿದ್ದ ಈ ಉದ್ಯಮಿ ಸಧ್ಯ ದೂರು ನೀಡಿದ್ದಾರೆ. ಅಲ್ಲದೇ ಹುಬ್ಬಳ್ಳಿಯಲ್ಲಿ 10 ಕೋಟಿಗೂ ಅಧಿಕ ಹಣ ಪಂಗನಾಮ ಆಗಿದೆ ಎನ್ನುತ್ತಾರೆ. ಸಧ್ಯ ನಾನೊಬ್ಬ ದೂರು ನೀಡಿದ್ದೇನೆ. ನನ್ನ ತರಹ 40-50 ಜನ ಇದ್ದಾರೆ ಅವರೆಲ್ಲಾ ದೂರು ನೀಡಬಹುದು ಅವರಿಗೂ ಇದೇ ರೀತಿ ಮೋಸ ಆಗಿದೆ ಎನ್ನುತ್ತಾರೆ.

ಅಷ್ಟಕ್ಕೂ ಈ ಬಿಟ್ ಕಾಯಿನ್ ಅಂದರೆ ಎನು ಅಂತಿರಾ ಸಿಂಪಲ್ ಆಗಿ ಹೇಳಬೇಕು ಅಂದರೆ ಡಿಜಿಟಲ್ ಕರೆನ್ಸಿ, ಒಂದ್ ರೀತಿ ಗೋಲ್ಡ್ ಕಾಯಿನ್ ಇದ್ದಾಗೆ.ಮಾರ್ಕೆಟ್ ನಲ್ಲಿ ಅದಕ್ಕೆ ಎಷ್ಟು ಬೆಲೆ ಇದೆಯೋ ಅಲ್ಲಿಯೇ ಸೇಲ್ ಮಾಡಿ ಹಣ ನಿಮ್ಮ ಖಾತೆಗೆ ಜಮಾ ಆಗುತ್ತಂತೆ.

ಅದೇ ರೀತಿ ಈ ಬಿಟ್ ಕಾಯಿನ್ ದಂಧೆ ಕೂಡಾ ನಡೆಯುತ್ತೆ. ಒಂದು ರೀತಿಯಲ್ಲಿ ಮಾಯದ ಮೋಸಜಾಲ ಅಂತಲೇ ಹೇಳಬಹುದು. ಸಧ್ಯ ಕಳೆದ ಡಿಸೆಂಬರ್ ನಲ್ಲಿ ಆಂಧ್ರ ಮೂಲದ ವ್ಯಕ್ತಿ ಇದೇ ಬಿಟ್ ಕಾಯಿನ್ ಸಂಬಂಧವೇ ಹುಬ್ಬಳ್ಳಿಯ ಲಾಡ್ಜ್ ನಲ್ಲಿ ಸುಸೈಡ್ ಮಾಡಿಕೊಂಡಿದ್ದನಂತೆ. ಆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆ ಕೇಸ್ ಮಾಸುವ ಮುನ್ನವೇ ಪೊಲೀಸರಿಗೆ ಮತ್ತೊಂದು ದೊಡ್ಡ ಮಟ್ಟದ ದಂಧೆ ಬಯಲಾಗಿದೆ.

ಸಧ್ಯ ಪ್ರಕರಣ ದಾಖಲಿಸಿಕೊಂಡಿರುವ ಕಮರಿಪೇಟೆ ಪೊಲೀಸರು ಹುಬ್ಬಳ್ಳಿಯ ಏಜೆಂಟ್ ಚೇತನ್ ಪಾಟೀಲ್ ಬೆನ್ನುಬಿದ್ದಿದ್ದಾರೆ. ಆತ ಸಿಕ್ಕ ಬಳಿಕವಷ್ಟೆ ಎಷ್ಟು ಜನ ಇಲ್ಲಿ ಹಣ ಕಳೆದುಕೊಂಡಿದ್ದಾರೆನ್ನುವುದು ಬಯಲಾಗುತ್ತೆ. ಅಲ್ಲದೇ ದೆಹಲಿ ಮೂಲದ ಅಮಿತ್ ಮೇಲೆ ಈಗಾಗಲೆ ದೇಶದ ನಾನಾ ಕಡೆಗಳಲ್ಲಿ ಸಾಕಷ್ಟು ಪ್ರಕರಣ ದಾಖಲಾಗಿವೆ. ಅಲ್ಲದೇ ಅರೆಸ್ಟ್ ಕೂಡಾ ಆಗಿದ್ದಾನೆ. ಆದರೆ ಜನ ಮತ್ತೆ ಮತ್ತೆ ಮೋಸ ಹೋಗುತ್ತಿರೋದು ಮಾತ್ರ ನಿಜಕ್ಕೂ ದುರ್ದೈವದ ಸಂಗತಿ.

Edited By : Manjunath H D
Kshetra Samachara

Kshetra Samachara

16/02/2021 09:25 pm

Cinque Terre

61.98 K

Cinque Terre

13

ಸಂಬಂಧಿತ ಸುದ್ದಿ