ಹುಬ್ಬಳ್ಳಿ: ಕಳ್ಳತನ ಪ್ರಕರಣಗಳನ್ನು ಭೇದಿಸಿ ಸಾರ್ವಜನಿಕರಿಗೆ ರಕ್ಷಣೆ ಮಾಡುತ್ತಿದ್ದ ಅರಕ್ಷಕರ ಮನೆಯ ಮೇಲೆ ಕಳ್ಳತನವಾಗಿರುವ ಪ್ರಕರಣವೊಂದು ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ.ಇಷ್ಟುದಿನ ಬೇರೆ ಕಡೆಗಳಲ್ಲಿ ಕೈಚಳಕ ತೋರಿಸುತ್ತಿದ್ದ ಕಳ್ಳರು ಈಗ ಪೊಲೀಸರ ಮನೆಗಳನ್ನೂ ಕಳ್ಳರು ಟಾರ್ಗೆಟ್ ಮಾಡುತ್ತಿದ್ದು, ಪೊಲೀಸ್ ವಸತಿ ಗೃಹದಲ್ಲಿಯೇ ಕಳ್ಳತನ ಮುಂದುವರೆದಿದೆ.
ಹೌದು..ಹುಬ್ಬಳ್ಳಿಯ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ರಾಠೋಡ ಅವರ ಮನೆ ಕಳ್ಳತನವಾದ ಬೆನ್ನಲ್ಲೇ ಸಂಚಾರಿ ಠಾಣೆಯ ಹವಾಲ್ದಾರ ನಾಯ್ಕರ್ ಎಂಬುವವರ ಮನೆಯೂ ಕಳ್ಳತನವಾಗಿದೆ.
ಕರ್ತವ್ಯಕ್ಕೆ ಹೋದ ಸಮಯದಲ್ಲಿ ಕಳ್ಳತನ ನಡೆಯುತ್ತಿದ್ದು, ರಾಠೋಡ ಎನ್ನುವವರ ಮನೆಯಲ್ಲಿ ಚಿನ್ನಾಭರಣ ದೋಚಿಕೊಂಡು ಹೋಗಿದ್ದಾರೆ.ಹವಾಲ್ದಾರ್ ನಾಯ್ಕರ ಮನೆಯಲ್ಲಿ ಏನೇನು ಕಳ್ಳತನವಾಗಿದೆ ಮಾಹಿತಿ ಕಲೆ ಹಾಕಲಾಗುತ್ತಿದೆ.
ಘಟನೆಯ ಬಗ್ಗೆ ಉಪನಗರ ಠಾಣೆ ಪೊಲೀಸರಿಗೆ ಮಾಹಿತಿ ಲಭಿಸಿದ್ದು, ಘಟನಾ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ.
Kshetra Samachara
15/02/2021 11:14 am