ಧಾರವಾಡ: ಧಾರವಾಡದ ಡಿಪೊ ಸರ್ಕಲ್ ಬಳಿಯ ಮನೆಯೊಂದರಲ್ಲಿ ಭಾನುವಾರ ಸಂಜೆ ನಡೆದ ಕೊಲೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಆಕಾಶ ಕೋಟೂರು (30) ಎಂಬ ಯುವಕ ಹತ್ಯೆಗೀಡಾಗಿದ್ದು, ಆಕಾಶನ ಚಿಕ್ಕಪ್ಪ ಪ್ರಕಾಶ ಕೋಟೂರು ಎಂಬಾತನೇ ಹತ್ಯೆ ಮಾಡಿದ್ದು ಎಂದು ಗೊತ್ತಾಗಿದೆ. ಮೊದಲು ಸಹೋದರನಿಂದಲೇ ತಮ್ಮನ ಹತ್ಯೆಯಾಗಿದೆ ಎಂದು ಗೊತ್ತಾಗಿತ್ತು. ಇದೀಗ ಪೊಲೀಸರು ತನಿಖೆ ನಡೆಸುತ್ತಿದ್ದು, ಆಕಾಶನ ಚಿಕ್ಕಪ್ಪ ಪ್ರಕಾಶ ಎಂಬಾತ ಹತ್ಯೆ ಮಾಡಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಈ ಕುಟುಂಬ ಕೂಡು ಕುಟುಂಬವಾಗಿದ್ದು, ಕಳೆದ 18 ವರ್ಷಗಳ ಹಿಂದೆ ಹತ್ಯೆಗೀಡಾದ ಆಕಾಶನ ತಂದೆ ಮೃತಪಟ್ಟಿದ್ದಾರೆ. ಅವರ ಮರಣದ ನಂತರ ಆಕಾಶ ತನ್ನ ಚಿಕ್ಕಪ್ಪನೊಂದಿಗೆ ವಾಸ ಮಾಡುತ್ತಿದ್ದ. ಆಕಾಶ ದಿನನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಎಂದು ಈ ಹತ್ಯೆಗೆ ಕಾರಣ ಹೇಳಲಾಗುತ್ತಿದೆ. ಇನ್ನೊಂದೆಡೆ ಆಸ್ತಿ ವಿವಾದ ಕೂಡ ಇರಬಹುದು ಎಂದು ಹೇಳಲಾಗುತ್ತಿದೆ. ಆದರೆ, ಇದರ ಸ್ಪಷ್ಟ ಚಿತ್ರಣ ಪೊಲೀಸ್ ತನಿಖೆಯಿಂದಷ್ಟೇ ಗೊತ್ತಾಗಬೇಕಿದೆ.
ಸಂಜೆ 6 ಗಂಟೆಯ ಸುಮಾರಿಗೆ ಆಕಾಶನನ್ನು ಮನೆಯಲ್ಲೇ ಮಾರಕಾಸ್ತ್ರಗಳಿಂದ ಹತ್ಯೆ ಮಾಡಲಾಗಿದ್ದು, ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಎಸಿಪಿ ಅನುಷಾ, ಉಪನಗರ ಠಾಣೆ ಇನ್ ಸ್ಪೆಕ್ಟರ್ ಪ್ರಮೋದ ಯಲಿಗಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Kshetra Samachara
14/02/2021 11:33 pm