ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಮದಿಹಾಳದಲ್ಲಿ ರಾತ್ರಿ ಬಂದಿದ್ದು 9 ಜನ ಕಳ್ಳರು

ಧಾರವಾಡ: ಧಾರವಾಡದ ಮದಿಹಾಳದಲ್ಲಿ ಸರಣಿಗಳ್ಳತನ ಮಾಡಿರುವ ಕಳ್ಳರ ಚಲನವಲನ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಒಟ್ಟು 9 ಜನ ಕಳ್ಳರು ಮದಿಹಾಳದಲ್ಲಿ ಸುತ್ತಾಡಿದ್ದಾರೆ. ಅದರಲ್ಲಿ ಆರು ಜನ ತಮ್ಮ ಮುಖಕ್ಕೆ ಮುಖಗವಸು ಹಾಕಿಕೊಂಡಿದ್ದಾರೆ. ಮದಿಹಾಳ ಹಾಗೂ ಎಂ.ಆರ್.ನಗರದಲ್ಲಿ ಈ ಕಳ್ಳರು ಮೂರ್ನಾಲ್ಕು ಮನೆಗಳಿಗೆ ಕನ್ನ ಹಾಕಿದ್ದಾರೆ.

ಒಟ್ಟಾಗಿಯೇ ಸುತ್ತಾಡಿರುವ ಈ ಕಳ್ಳರು ಮೊದಲು ಬೇರೆ ಮಾರ್ಗಕ್ಕೆ ಹೋಗಿ ನಂತರ ಕಳ್ಳತನ ಮಾಡಬೇಕಾದ ಮನೆಯತ್ತ ಹೋಗುತ್ತಾರೆ. ಇವರನ್ನು ಕಂಡ ನಾಯಿಗಳು ಬೊಗಳಿದ್ದು, ಆ ನಾಯಿಗಳಿಗೆ ಕಳ್ಳನೊಬ್ಬ ಕಲ್ಲು ಕೂಡ ಎಸೆದಿದ್ದಾನೆ.

ಧಾರವಾಡದ ಕೋಳಿಕೆರೆಯಲ್ಲೂ ಸಹ ಐದು ಜನ ಕಳ್ಳರು ಗುಂಪಾಗಿ ಸುತ್ತಾಡಿದ್ದು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಸದ್ಯ ಮದಿಹಾಳದಲ್ಲಿ 9 ಜನ ಕಳ್ಳರು ಗುಂಪು ಗುಂಪಾಗಿ ಸುತ್ತಾಡಿದ್ದು, ಪೊಲೀಸರು ಈ ಪ್ರಕರಣವನ್ನು ಹೇಗೆ ಬೇಧಿಸುತ್ತಾರೋ ಕಾದು ನೋಡಬೇಕಿದೆ.

Edited By : Manjunath H D
Kshetra Samachara

Kshetra Samachara

13/02/2021 05:51 pm

Cinque Terre

103.93 K

Cinque Terre

16

ಸಂಬಂಧಿತ ಸುದ್ದಿ