ಧಾರವಾಡ: ಧಾರವಾಡದ ಡಿಮಾನ್ಸ್ ಗೆ ಚಿಕಿತ್ಸೆಗೆಂದು ಬಂದಿದ್ದ ಮಾನಸಿಕ ಅಸ್ವಸ್ಥನೋರ್ವ ನಾಪತ್ತೆಯಾದ ಘಟನೆ ನಡೆದಿದೆ.
ರಾಯಚೂರು ಮೂಲದ ಮಲ್ಲಿಕಾರ್ಜುನ ಬಾಪೂರ (37) ಎಂಬ ವ್ಯಕ್ತಿಯೇ ನಾಪತ್ತೆಯಾದವನು. ಮಾನಸಿಕವಾಗಿ ಅಸ್ವಸ್ಥನಾಗಿದ್ದ ಈ ವ್ಯಕ್ತಿಯನ್ನು ಧಾರವಾಡದ ಡಿಮಾನ್ಸ್ ಗೆ ಆತನ ಮನೆಯವರು ಚಿಕಿತ್ಸೆಗೆಂದು ಕರೆದುಕೊಂಡು ಬಂದಿದ್ದರು. ಇದಕ್ಕೂ ಮುನ್ನ ರೋಗಿಗೆ ಕೊರೊನಾ ತಪಾಸಣೆ ಮಾಡಿಸಲೆಂದು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ ವೇಳೆ ಮಲ್ಲಿಕಾರ್ಜುನ ಅಲ್ಲಿಂದಲೇ ನಾಪತ್ತೆಯಾಗಿದ್ದಾನೆ ಎಂದು ಆತನ ಕುಟುಂಬಸ್ಥರು ಧಾರವಾಡದ ಉಪನಗರ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
Kshetra Samachara
11/02/2021 06:05 pm