ಕುಂದಗೋಳ : ನಮ್ಮದು ತೆಲುಗು ಶೆಟ್ಟರ್ ಕುಟುಂಬ ನಮ್ಮ ತಂದೆ ತಾಯಿಗೆ ನಾವು ಇಬ್ಬರು ಪುತ್ರರೂ, ಮೂವರು ಪುತ್ರಿಯರು, ಈ ಮಕ್ಕಳಲ್ಲಿ ಒಬ್ಬನಿಗೆ ಅಂಗವಿಕಲತೆ ಒಂದೇ ಶರೀರಕ್ಕೆ ಹೊಂದಿಕೊಂಡು ಇಬ್ಬರು ಜನಿಸಿದ್ದಾರೆ.
ಇವರಿಗೆ ಎರೆಡು ತಲೆ ನಾಲ್ಕು ಕೈ ಎರೆಡು ಕಾಲುಗಳಿವೆ ಈಗಾಗಲೇ ನಮ್ಮ ತಂದೆ ತಾಯಿ ಈ ಕಷ್ಟ ನೋಡದೆ ನದಿಗೆ ಹಾರಿ ತೀರಿ ಹೋದರು.
ನಮ್ಮ ಒಬ್ಬ ತಂಗಿ ಅರ್ಫನೇಜ್ ಚಾರೀಟಿ ಪ್ರೌಢಶಾಲೆಯಲ್ಲಿ ಹೈದ್ರಾಬಾದ್ ನಲ್ಲಿ ಓದುತ್ತಿದ್ದಾಳೆ ಹಾಗೂ ಒಬ್ಬ ತಂಗಿಯ ಮದುವೆ ನಿಶ್ಚಯವಾಗಿದೆ.
ಇವರಿಗೆ ಬಂಧು ಬಳಗ ಯಾರು ಇಲ್ಲಾ ಈ ಪತ್ರ ಓದಿ ಹಣ ದಾನ ನೀಡಿ ಎಂದು ನಿಮ್ಮ ಮನೆಗೆ ಯಾರಾದ್ರೂ ಬಂದ್ರೇ ಅಥವಾ ಈಗಾಗಲೇ ಬಂದು ಹೋಗಿದ್ದರೆ ಎಚ್ಚರ ಕುಂದಗೋಳ ತಾಲೂಕಿನ ಹಿರೇಹರಕುಣಿ, ಕಮಡೊಳ್ಳಿ, ಸಂಶಿ ಗ್ರಾಮಗಳಲ್ಲಿ ಇಂತಹದೊಂದು ಘಟನೆ ನಡೆದಿದ್ದು ಈ ನೆಪ ಹೇಳಿ ಜನರಿಂದ ಹಣ ಪಡೆಯಲಾಗಿದೆ.
ನಾನು ಮೂಖ ನಮಗೆ ಕಷ್ಟ ಇದೆ ಎಂದು ಹೇಳಿಕೊಂಡು ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬ ಹಿರೇಹರಕುಣಿಯಲ್ಲಿ ಹಣ ಸಂಗ್ರಹಿಸಿದರೇ, ಇಳಿ ವಯಸ್ಸಿನ ವೃದ್ಧನೊಬ್ಬ ಕಮಡೊಳ್ಳಿಯಲ್ಲಿ ಹಣ ಸಂಗ್ರಹಿಸಿ ಸಾರ್ವಜನಿಕರು ಪ್ರಶ್ನೇ ಮಾಡಿದ ಕೂಡಲೇ ಎಸ್ಕೇಪ್ ಆಗಿದ್ದಾರೆ.
ಈಗಾಗಲೇ ಹಳ್ಳಿಗಳಲ್ಲಿ ಭಾರತ ಸರ್ಕಾರ ಎಂದು ಮುದ್ರಿಸಿರುವ ತಮ್ಮ ಕಷ್ಟ ಬರೆದ ಝೆರಾಕ್ಸ್ ಪ್ರತಿ ತೋರಿಸುವ ಇವರು ನಕಲಿ ಡಾಕ್ಟರ್ ಸಹಿ ಹಾಗೂ ಸೀಲ್ ಹಾಕಿಸಿರುವ ಝೆರಾಕ್ಸ್ ಪ್ರತಿಗಳನ್ನ ಜನರಿಗೆ ತೋರಿಸಿ ಹಣ ವಸೂಲಿ ಮಾಡುತ್ತಿದ್ದಾರೆ.
ಕಮಡೊಳ್ಳಿ, ಹಿರೇಹರಕುಣಿ, ಸಂಶಿ ಗ್ರಾಮಗಳಲ್ಲಿ 20. 30. 50. 100 ರೂಪಾಯಿಗಳಂತೆ ಜನರಿಂದ ಹಣ ಪಡೆದು ಮುಂದೆ ಸಾಗಿದ್ದಾರೆ.
ಹಳ್ಳಿ ಕುಟುಂಬಗಳನ್ನೇ ಟಾರ್ಗೇಟ್ ಮಾಡಿದ ಈ ಖತರ್ನಾಕ್ ಜನರು ಅನುಕಂಪದ ಆಧಾರದ ಮೇಲೆ ಹಣ ಸಂಗ್ರಹಿಸುವ ಮೋಸದ ಜಾಲ ಆರಂಭಿಸಿದ್ದಾರೆ.
ಈ ಕುರಿತು ಇದುವರೆಗೂ ಯಾವುದೇ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿಲ್ಲ, ಮುಖ್ಯವಾಗಿ ಜನ ನಮಗ್ಯಾಕೆ ಎಂದು ದೂರು ನೀಡಿಲ್ಲ.
ಸೋಮವಾರ ಹಿರೇಹರಕುಣಿಯಲ್ಲಿ, ಭಾನುವಾರ ಕಮಡೊಳ್ಳಿಯಲ್ಲಿ ಸೋಮವಾರ ಸಂಜೆ ಸಂಶಿ ಗ್ರಾಮಗಳಲ್ಲಿ ಹಣ ಸಂಗ್ರಹಿಸಿ ತಲೆ ಮರೆಸಿಕೊಂಡಿದ್ದಾರೆ.
ಈ ಬಗ್ಗೆ ಹಳ್ಳಿ ಕುಟುಂಬಗಳೂ ಎಚ್ಚರ ವಹಿಸಿ, ನಾನು ಹೈದ್ರಾಬಾದ್ ಮೂಲದವನು ನನಗೆ ಹಣ ಕೊಡಿ ಎಂದು ಯಾರಾದರೂ ಬಂದಲ್ಲಿ ನೇರ ಪೊಲೀಸ್ ಠಾಣೆಗೆ ಆತನನ್ನು ಕರೆದೊಯ್ಯಿರಿ, ಕಷ್ಟಗಳ ಹೆಸರಲ್ಲಿ ಹಣ ಸಂಗ್ರಹ ಮಾಡುವವರ ಬಗ್ಗೆ ಇರಲಿ ಎಚ್ಚರ.
Kshetra Samachara
09/02/2021 01:44 pm