ಧಾರವಾಡ: ಧಾರವಾಡಕ್ಕೆ ಕಳ್ಳರ ದಂಡು ಎಂಟ್ರಿ ಕೊಟ್ಟಿದೆ ಎಂದು ಹೇಳಲಾಗುತ್ತಿದ್ದು, ನಾಲ್ಕು ಜನ ವ್ಯಕ್ತಿಗಳು ಅನುಮಾನಾಸ್ಪದ ರೀತಿಯಲ್ಲಿ ರಾತ್ರಿ ವಿವಿಧ ಕಡೆ ಸಂಚರಿಸುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ರಾತ್ರಿ ಸಮಯದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ಕಳ್ಳತನಕ್ಕಿಳಿಯಲು ಒಂದು ದಂಡೇ ಧಾರವಾಡಕ್ಕೆ ಬಂದಿದೆ ಎನ್ನಲಾಗುತ್ತಿದೆ. ಧಾರವಾಡದ ಮದಿಹಾಳದ ಸಿದ್ದರಾಮಯ್ಯ ಕಾಲೊನಿಯಲ್ಲಿ ನಿನ್ನೆ ರಾತ್ರಿ ನಾಲ್ಕು ಜನ ಅನುಮಾನಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಸಾರ್ವಜನಿಕರೇ ಈ ದೃಶ್ಯಗಳನ್ನು ಧಾರವಾಡ ಶಹರ ಠಾಣೆಯ ಪೊಲೀಸರಿಗೆ ನೀಡಿದ್ದಾರೆ. ವಿವಿಧ ರೀತಿಯ ಪೋಷಾಕು ಧರಿಸಿ ಕಳ್ಳರು ರಾತ್ರಿ ಸಮಯದಲ್ಲಿ ತಿರುಗಾಡುತ್ತಿದ್ದಾರೆ. ಮೂರು ದಿನಗಳ ಹಿಂದಷ್ಟೇ ಧಾರವಾಡದ ಕೋಳಿಕೇರಿ ಪ್ರದೇಶದಲ್ಲಿ ಮೂರು ಮನೆಗಳಲ್ಲಿ ಕಳ್ಳತನವಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದ್ದು, ಸಾರ್ವಜನಿಕರಿ ಎಚ್ಚರಿಕೆಯಿಂದ ಇರಬೇಕಾದ ಅನಿವಾರ್ಯತೆ ಇದೆ.
Kshetra Samachara
09/02/2021 12:17 pm