ಧಾರವಾಡ: ಸಾಲ ಮರುಪಾವತಿ ಮಾಡುವಂತೆ ಖಾಸಗಿ ಬ್ಯಾಂಕ್ ನಿಂದ ನೋಟಿಸ್ ಬಂದ ಹಿನ್ನೆಲೆಯಲ್ಲಿ ಅದಕ್ಕೆ ಹೆದರಿ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡದ ಕಮಲಾಪುರದಲ್ಲಿ ನಡೆದಿದೆ.
ಮಹಾರುದ್ರಪ್ಪ ಕೋಟಿ (52) ಎಂಬ ರೈತನೇ ಆತ್ಮಹತ್ಯೆ ಮಾಡಿಕೊಂಡವನು. ಬೀರೇಶ್ವರ ಸೊಸೈಟಿಯಿಂದ ಈತನಿಗೆ ನೋಟಿಸ್ ಬಂದಿತ್ತು. ಸೊಸೈಟಿ ಸೇರಿ ವಿವಿಧ ಕಡೆ ಈ ರೈತ ಸಾಲ ಮಾಡಿದ್ದ ಎನ್ನಲಾಗಿದೆ. ಸಾಲ ತುಂಬಲು ಹಣ ಇಲ್ಲದೇ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಊರ ಹೊರಗಿನ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
08/02/2021 07:31 pm