ಕುಂದಗೋಳ : ಪಟ್ಟಣದಲ್ಲಿ ಮೊಬೈಲ್ ಹಾಗೂ ದ್ವಿಚಕ್ರ ವಾಹನಗಳ ಕಳ್ಳರ ಹಾವಳಿ ಹೆಚ್ಚಾಗಿದ್ದು, ಈ ಕಳ್ಳರು ಕುಂದಗೋಳ ಪಟ್ಟಣದಲ್ಲಿ ಪ್ರತಿ ಬುಧವಾರ ನಡೆಯುವ ಸಂತೆಯನ್ನೇ ಟಾರ್ಗೇಟ್ ಮಾಡಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.
ಈಗಾಗಲೇ ಬುಧವಾರದ ಸಂತೆಯಲ್ಲಿ ಮೊಬೈಲ್ ಹಾಗೂ ದ್ವಿಚಕ್ರವಾಹನ ಕಳ್ಳತನವಾಗಿದ್ದರೂ ಯಾವುದೇ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿಲ್ಲ, ಇನ್ನು ಕುಂದಗೋಳ ಪಟ್ಟಣದಲ್ಲಿ ಪ್ರತಿ ಬುಧವಾರ ನಡೆಯುವ ಸಂತೇಗೆ ತಾಲೂಕಿನ 40ಕ್ಕೂ ಅಧಿಕ ಹಳ್ಳಿಯ ಜನರು ಅದರಲ್ಲೂ ರೈತಾಪಿ ವರ್ಗದವರೇ ಹೆಚ್ಚಾಗಿ ಸಂತೇಯಲ್ಲಿ ಭಾಗವಹಿಸುತ್ತಿದ್ದು ಜನರಿಗೆ ತಲೆ ಬಿಸಿಯಾಗಿದೆ.
ಸದ್ಯ ಕಳ್ಳತನದ ಪ್ರಕರಣ ಗಮನಿಸಿದರೇ ಸಂತೆಯನ್ನು ಟಾರ್ಗೇಟ್ ಮಾಡಿದ ಚಾಣಾಕ್ಷರೇ ಈ ಕೃತ್ಯ ಮಾಡುತ್ತಿದ್ದಾರೆ ಎಂಬ ಸಂಶಯ ಕಂಡು ಬರುತ್ತಿದೆ. ಸಂತೆಗೆ ಬಂದವರಲ್ಲಿ ಕೆಲವರು ಸಂತೆ ಮಾಡಿಟ್ಟ ಕೈ ಚೀಲ ಕಳೆದುಕೊಂಡ ಘಟನೆ ಕಳೆದ ಬುಧವಾರ ನಡೆದಿವೆ.
ಈ ಬಗ್ಗೆ ಪಟ್ಟಣ ಪಂಚಾಯಿತಿ ಧ್ವನಿ ವರ್ಧಕಗಳ ಮೂಲಕ ಜನರಿಗೆ ಸಂತೆಯಲ್ಲಿ ಉಂಟಾಗುತ್ತಿರುವ ಕಳ್ಳತನದ ಬಗ್ಗೆ ಜಾಗೃತಿ ಮೂಡಿಸಿದರೇ, ಪೊಲೀಸರು ಮಾರ್ಕೇಟ್ ವೃತ್ತದ ಬಳಿ ಸಿಸಿ ಕ್ಯಾಮರಾ ಅಳವಡಿಸಿದ್ದಾರೆ.
ಒಟ್ಟಾರೆ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಕುಂದಗೋಳ ಸಂತೆಯಲ್ಲಿ ಇದೇ ಮೊದಲ ಬಾರಿಗೆ ಈ ತರಹದ ಕಳ್ಳತನದ ಪ್ರಕರಣ ಕಂಡು ಬಂದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
Kshetra Samachara
04/02/2021 01:19 pm