ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮುಂದುವರೆದ ಎಸಿಬಿ ದಾಳಿ: ದೇವರಾಜ್ ಶಿಗ್ಗಾವಿ ಹೆಸರಿನಲ್ಲಿ ಇಲ್ಲಿವರೆಗೂ ಸಿಕ್ಕ ಆಸ್ತಿ ಎಷ್ಟು ಗೊತ್ತಾ..?

ಹುಬ್ಬಳ್ಳಿ: ಸಣ್ಣ ನೀರಾವರಿ ಇಲಾಖೆ ಇಇ ದೇವರಾಜ್ ಶಿಗ್ಗಾವಿಗೆ ಸೇರಿದ ಹಾಗೂ ಅವರ ಸಂಬಂಧಿಗಳ ಮನೆ ಮೇಲೆ ನಡೆದ ಎಸಿಬಿ ದಾಳಿಯ ವೇಳೆ ಅಪಾರ ಪ್ರಮಾಣ ಅಕ್ರಮ ಆಸ್ತಿಯ ಪತ್ತೆಯಾಗಿದೆ.

ಇಲ್ಲಿಯವರೆಗೂ ಎಸಿಬಿ ಅಧಿಕಾರಿಗಳು ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ದೇವರಾಜ್ ಅವರ ಪತ್ನಿಯ ಕಿರಿಯ ಸಹೋದರ ಕೃಷ್ಣ ಹೆಸರಿನಲ್ಲಿ ರಾಜೀವ್ ನಗರದಲ್ಲಿ 3 ಅಂತಸ್ತಿನ ಮನೆ.ದೇವರಾಜ ಶಿಗ್ಗಾವಿ ಪತ್ನಿಯ ತಂದೆ ಭೀಮಪ್ಪ ಹೆಸರಿನಲ್ಲಿ ಬಾಲಾಜಿ ನಗರದಲ್ಲಿ 2 ಅಂತಸ್ತಿನ ಆರ್.ಸಿ.ಸಿ ಮನೆ, ದೇವರಾಜ ಶಿಗ್ಗಾವಿ ತಾಯಿ ಕುಸುಮಾವತಿ ಹೆಸರಿನಲ್ಲಿ ಕೋಟಿಲಿಂಗ ನಗರದಲ್ಲಿ 2 ಅಂತಸ್ತಿನ ಮನೆ ಇದೆ.‌

ರಾಜೀವ್ ನಗರದ 2 ಅಂತಸ್ತಿನ ಭವ್ಯವಾದ ಮನೆ ಮತ್ತು ಕೋಟಿ ಲಿಂಗನಗರದ ಮನೆ ಅಂದಾಜು ಮೌಲ್ಯ 1.16 ಕೋಟಿ ಆಗಿದೆ.

ಇದಲ್ಲದೆ ಕೋಟಿಲಿಂಗ ನಗರದಲ್ಲಿ 2 ಖಾಲಿ ನಿವೇಶನಗಳು. ಹಾನಗಲ್ ತಾಲೂಕಿನ ಇನಾಂ ನೀರಲಗಿ ಮತ್ತು ಹುಬ್ಬಳ್ಳಿ ತಾಲೂಕಿನ ದೇವರ ಗುಡಿಹಾಳದಲ್ಲಿ ಒಟ್ಟು 26 ಎಕರೆ ಕೃಷಿ ಜಮೀನು.8 ಲಕ್ಷ ಮೌಲ್ಯದ ಎರಡು ವಾಹನಗಳು. 59.84 ಲಕ್ಷ ನಗದು ಪತ್ತೆ, 30 ಲಕ್ಷ ಉಳಿತಾಯ ಹಾಗೂ ಠೇವಣಿ ಖಾತೆಗಳಲ್ಲಿ ಹಣವನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

500 ಗ್ರಾಂ ಚಿನ್ನ ಹಾಗೂ 4 ಕೆ.ಜಿ ಬೆಳ್ಳಿ 3 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು.ದೇವರಾಜ್ ಶಿಗ್ಗಾವಿ ತಾಯಿ ಹೆಸರಿನಲ್ಲಿರುವ ಕೋಟಿಲಿಂಗ ನಗರದಲ್ಲಿನ ಮನೆ ಪರಿಶೀಲನೆ ಇನ್ನೂ ಮುಂದುವರೆದಿದೆ. ಎಸಿಬಿ ಎಸ್ಪಿ ನ್ಯಾಮಗೌಡ ಅವರ ನೇತೃತ್ವದಲ್ಲಿ ಈ‌ ಕಾರ್ಯಾಚರಣೆ ನಡೆಯುತ್ತಿದ್ದು, ಇಲ್ಲಿಯವರೆಗೆ

ಅಂದಾಜು 10 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. ನಾಳೆಯೂ‌ ಕೂಡ ಶೋಧ ಮುಂದುವರೆಯಲಿದೆ.

Edited By : Nagaraj Tulugeri
Kshetra Samachara

Kshetra Samachara

02/02/2021 08:10 pm

Cinque Terre

97.76 K

Cinque Terre

25

ಸಂಬಂಧಿತ ಸುದ್ದಿ