ಹುಬ್ಬಳ್ಳಿ: ಸಣ್ಣನೀರಾವರಿ ಇಲಾಖೆಯ ಇಇ ದೇವರಾಜ ಕೆ.ಶಿಗ್ಗಾವಿ ಅವರ ನಿವಾಸ ಮತ್ತು ತಾಯಿ ಹಾಗೂ ಮಾವನ ಮನೆಯ ಮೇಲೆ ಎಸಿಬಿ ಅಧಿಕಾರಿಗಳು ಇಂದು ಬೆಳಗ್ಗೆ ಏಕಕಾಲಕ್ಕೆ ದಾಳಿ ಮಾಡಿದ್ದು,ಬಗೆದಷ್ಟು ಚಿನ್ನಾಭರಣ ಹಾಗೂ ಆಸ್ತಿ ಪತ್ತೆಯಾಗುತ್ತಿದೆ.
ದೇವರಾಜ್ ಅವರ ಇಂಡಿಯನ್ ಓವರ್ ಸಿಸ್ ಬ್ಯಾಂಕ್ ಲಾಕರನಲ್ಲಿಯೂ 56.5 ಲಕ್ಷ ಹಣ ಹಾಗೂ 400 ಗ್ರಾಂ ಬಂಗಾರದ ಆಭರಣಗಳು, ಆಸ್ತಿ ಪತ್ರಗಳು ಪತ್ತೆಯಾದ್ರೆ ಇತ್ತ ಮಾವ ಭೀಮಪ್ಪ ಗಾಡಿವಡ್ಡರ ಅವರ ಲಾಕರ್ ನಲ್ಲಿ ಅಪಾರ ಪ್ರಮಾಣ ಬಂಗಾರ ಹಾಗೂ ಹಣ ಪತ್ತೆಯಾಗಿದೆ. ವಶಪಡಿಸಿಕೊಂಡ ಸ್ವತ್ತುಗಳ ಎಣಿಕೆ ನಡೆಸಲಾಗುತ್ತಿದೆ. ಇನ್ನೂ ತನಿಖೆ ನಡೆಸಲಾಗುತ್ತಿದೆ.
Kshetra Samachara
02/02/2021 07:00 pm