ಧಾರವಾಡ: ಬಹು ದಿನಗಳಿಂದ ಧಾರವಾಡ ಜಿಲ್ಲಾಧಿಕಾರಿಯ ಅಂಗರಕ್ಷಕ (ಗನ್ ಮ್ಯಾನ್) ನಾಗಿದ್ದ ಪ್ರಕಾಶ ಮಾಳಗಿಯನ್ನು ಆ ಹುದ್ದೆಯಿಂದ ಬೇರೆ ಕಡೆ ವರ್ಗಾಯಿಸಲಾಗಿದೆ. ನಿನ್ನೆ ಧಾರವಾಡ ತಾಲೂಕಿನ ಯಾದವಾಡ ಗ್ರಾಮಸ್ಥರು ಪ್ರಕಾಶ ಮಾಳಗಿ ವಿರುದ್ಧ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದರಿಂದ ಪ್ರಕಾಶ ಮಾಳಗಿಯನ್ನು ಬೇರೆ ಕಡೆಗೆ ವರ್ಗಾವಣೆ ಮಾಡಲಾಗಿದೆ.
ಬಹಳ ವರ್ಷಗಳಿಂದ ಜಿಲ್ಲಾಧಿಕಾರಿಗಳಿಗೆ ಪ್ರಕಾಶ ಮಾಳಗಿಯೇ ಅಂಗರಕ್ಷಕನಾಗಿ ಮುಂದುವರೆದುಕೊಂಡು ಬಂದಿದ್ದ. ತಾನು ಡಿಸಿ ಗನ್ ಮ್ಯಾನ್ ಎಂದು ಹೇಳಿಕೊಂಡು ದಬ್ಬಾಳಿಕೆ ನಡೆಸುತ್ತಿದ್ದಾನೆ. ಅಲ್ಲದೇ ಕೆಲವರ ಮೇಲೆ ಹಲ್ಲೆ ಕೂಡ ನಡೆಸಿದ್ದಾನೆ ಆತನನ್ನು ವಜಾ ಮಾಡಿ ಎಂದು ಯಾದವಾಡ ಗ್ರಾಮಸ್ಥರು ನಿನ್ನೆಯಷ್ಟೇ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದರು.
ಇಂದು ಎಸ್ಪಿ ಕೃಷ್ಣಕಾಂತ ಅವರು ಡಿಸಿ ಗನ್ ಮ್ಯಾನ್ ಆಗಿದ್ದ ಪ್ರಕಾಶ ಮಾಳಗಿಯನ್ನು ಆ ಸ್ಥಾನದಿಂದ ತೆಗೆದು ಬೇರೆ ಕಡೆಗೆ ವರ್ಗಾವಣೆ ಮಾಡಿದ್ದಾರೆ. ಪ್ರಕಾಶ ಮಾಳಗಿಯನ್ನು ಎಲ್ಲಿಗೆ ವರ್ಗಾವಣೆ ಮಾಡಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಿಲ್ಲ.
Kshetra Samachara
02/02/2021 05:12 pm