ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವಿವೇಕಾನಂದ ಆಸ್ಪತ್ರೆಯ ವಿರುದ್ಧ ಸುಳ್ಳು ಆರೋಪ! ವೈದ್ಯರ ಸ್ಪಷ್ಟನೆ

ಹುಬ್ಬಳ್ಳಿ- ಕಳೆದ ಎರಡು ದಿನಗಳ ಹಿಂದೆ ಹೃದಯಾಘಾತದಿಂದ ಬಳಲುತ್ತಿದ್ದ ಸುವರ್ಣ ಎಂಬ ಮಹಿಳೆ ಸಾವನಪ್ಪಿದ್ದರೂ ಹಣ ಪಡೆದ ಮೇಲೆಯೇ ಖಾಸಗಿ ಆಸ್ಪತ್ರೆಯವರು ಸಾವಿನ ಸುದ್ದಿ ತಿಳಿಸಿದ್ದಾರೆ ಎಂದು, ರೋಗಿಯ ಸಂಬಂಧಿಕರು ಆಸ್ಪತ್ರೆಯ ವಿರುದ್ಧ ಆರೋಪ ಮಾಡಿರುವುದು ತನಿಖೆಯ ನಂತರ ಸುಳ್ಳ ಎಂದು ತಿಳಿದು ಬಂದಿದೆ..

ನಗರದ ದೇಶಪಾಂಡೆ ನಗರದಲ್ಲಿರುವ ವಿವೇಕಾನಂದ ಆಸ್ಪತ್ರೆಯ ಮೇಲೆ ಮಾಡಿರುವ ಆರೋಪ ಸುಳ್ಳು ಎಂದು ಸಾಬೀತು ಆಗಿದೆ. ಹೃದಯದಲ್ಲಿ ವ್ಯಾಲಡನ್ ರೋಗದಿಂದ ಸುವರ್ಣವರು ಬಳ್ಳುತ್ತೀದ್ದರು. ಜ. 27ರಂದು ಆಸ್ಪತ್ರೆಗೆ ದಾಖಲಾಗಿದ್ದು, 2 ದಿನ ಚಿಕಿತ್ಸೆ ನೀಡಲಾಗಿತ್ತು. ಜ. 29 ಸರ್ಜರಿ ಆದ ಮೇಲೆ 2 ಗಂಟೆಗಳ ಮರಣ ಹೊಂದಿದರು.

ಆಯುಷ್ಮಾನ ಭಾರತ ಕಾರ್ಡ್ ಯೋಜನೆ ಅಡಿ ಆಸ್ಪತ್ರೆಗೆ ಆಗಮಿಸಿದ್ದರಿಂದ, ಮೊದಲಿಗೆ 30 ಸಾವಿರ ರೂ. ಆಸ್ಪತ್ರೆಗೆ ಹಣವನ್ನು ತುಂಬಬೇಕು ಎಂದು ಹೇಳಿದ್ದಾಗ, ರೋಗಿ ಸಂಬಂಧಿಕರರು ನಾವು ಬಡವರು ಎಂದು ಹೇಳಿದ ಕೂಡಲೇ, ರಿಯಾಯಿತಿ ಮಾಡಿ 20 ಸಾವಿರ ರೂ. ಪಾವತಿಸುವದಾಗಿ ಹೇಳಲಾಗಿತ್ತು.

ಕಾರಣಂತರಗಳಿಂದ ಮರಣ ಹೊಂದಿದ್ದರಿಂದ 20 ಸಾವಿರ ರೂ. ಸಹ ಮನ್ನಾ ಮಾಡಲಾಗಿದ್ದು, ರೋಗಿಯ ಸಂಬಂಧಿಗಳು ಹಣವನ್ನು ಪಾವತಿ ಮಾಡಿಲ್ಲಾ. ನಮ್ಮ ಆಸ್ಪತ್ರೆಯ ಮೇಲೆ ತಪ್ಪಾದ ಆರೋಪವನ್ನು ಮಾಡಿದ್ದಾರೆ ಎಂದು ವಿವೇಕಾನಂದ ಆಸ್ಪತ್ರೆಗೆ ಸಂಬಂಧಿಸಿದ ವೈದ್ಯರು ಪಬ್ಲಿಕ್ ನೆಕ್ಸ್ಟ್ ಮೂಲಕ ತಿಳಿಸಿದ್ದಾರೆ...

Edited By : Manjunath H D
Kshetra Samachara

Kshetra Samachara

01/02/2021 10:25 pm

Cinque Terre

72.08 K

Cinque Terre

27

ಸಂಬಂಧಿತ ಸುದ್ದಿ