ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕಸ ಸಂಗ್ರಹಣೆ ಮಾಡುವ ಟಿಪ್ಪರಗಳ ಬ್ಯಾಟರಿಯನ್ನು ಕಳ್ಳತನ ಮಾಡಿರುವ ಘಟನೆ ನಗರದ ನ್ಯೂ ಇಂಗ್ಲೀಷ್ ಸ್ಕೂಲ್ ಹತ್ತಿರ ನಡೆದಿದೆ.
ಚಾಲಕರು ಕೆಲಸ ಮುಗಿದ ನಂತರ ವಲಯ ಕಚೇರಿ 11ರಲ್ಲಿ ವಾಹನ ನಿಲ್ಲಿಸಿ ಹೋಗಿದ್ದಾರೆ. ಖದೀಮರು ರಾತ್ರೋರಾತ್ರಿ ಇಲ್ಲಿನ ಸುಮಾರು 9 ವಾಹನಗಳ ಬ್ಯಾಟರಿಗಳನ್ನು ಕಳ್ಳತನ ಮಾಡಿದ್ದಾರೆ. ಈ ಕುರಿತು ಕಸಬಾಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಶೋಧನೆ ನಡೆಸಿದ್ದಾರೆ.
Kshetra Samachara
01/02/2021 10:11 am