ಕಲಘಟಗಿ: ಪತಿಯ ಕುಟುಂಬಸ್ಥರ ಕಿರುಕುಳ ತಾಳಲಾರದೆ ಆರು ತಿಂಗಳ ಗರ್ಭಿಣಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಕಲಘಟಗಿ ತಾಲೂಕಿನ ಗಳಗಿ ಹುಲಕೊಪ್ಪದಲ್ಲಿ ನಡೆದಿದೆ.
ಹುಲಕೊಪ್ಪದ ಕಾವ್ಯ ತಡಸಮಠ (22) ಆತ್ಮಹತ್ಯೆಗೆ ಶರಣಾದ ಗರ್ಭಿಣಿ. ಕಾವ್ಯ ಮನೆಯವರ ಕಿರುಕುಳದಿಂದ ನಿನ್ನೆಯಷ್ಟೇ (ಜ.28)ರಂದು ಧಾರವಾಡ ನಗರದ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಈ ವೇಳೆ ಪೊಲೀಸರು ಎದುರೇ ಪತಿ-ಪತ್ನಿ ಮಧ್ಯೆ ಸಂಧಾನ ನಡೆದಿತ್ತು. ಆದರೆ ಇಂದು ಕಾವ್ಯ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವರದಕ್ಷಿಣೆ ತರುವಂತೆ ಮಗಳಿಗೆ ಆಕೆಯ ಪತಿಯ ಕುಟುಂಬಸ್ಥರು ಕಿರುಕುಳ ನೀಡಿದ್ದಾರೆ. ಇದರಿಂದ ಮನನೊಂದು ಮಗಳು ಆತ್ಮಹತ್ಯೆಗೆ ಮಾಡಿಕೊಂಡಿದ್ದಾಳೆ ಎಂದು ಕಾವ್ಯ ಅವರ ಪೋಷಕರು ಆರೋಪಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕಲಘಟಗಿ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Kshetra Samachara
29/01/2021 01:28 pm