ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಅಪ್ಪನ ಹಾದಿಯನ್ನೇ ತುಳಿದ ಮಗ

ಧಾರವಾಡ: ಧಾರವಾಡ ತಾಲೂಕಿನ ಯರಿಕೊಪ್ಪ ಗ್ರಾಮದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ರಮ್ಯಾ ರೆಸಿಡೆನ್ಸಿ ಬಳಿ ಫ್ರುಟ್ ಇರ್ಫಾನ್ ಮಗ ಅರಬಾಜ್‌ ವ್ಯಕ್ತಿಯೊಬ್ಬರಿಗೆ ಮಾರಕಾಸ್ತ್ರಗಳನ್ನು ತೋರಿಸಿ ಜೀವ ಬೆದರಿಕೆ ಹಾಕಿದ್ದಾನೆ ಎಂಬ ಆರೋಪ ಕೇಳಿ ಬಂದಿದ್ದು, ರೌಡಿ ಶೀಟರ್ ಆಗಿದ್ದ ಫ್ರುಟ್ ಇರ್ಫಾನ್ ಹಾದಿಯನ್ನೇ ಆತನ ಮಗ ಕೂಡ ತುಳಿದಿದ್ದಾನೆ.

ಅರಬಾಜ್ ತನ್ನ ಸಹಚರರೊಂದಿಗೆ ಧಾರವಾಡದ ರಮ್ಯಾ ರೆಸಿಡೆನ್ಸಿ ಬಳಿ ವ್ಯಕ್ತಿಯೊಬ್ಬರನ್ನು ಕರೆಯಿಸಿಕೊಂಡು ಜೀವ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ಸದ್ಯ ಧಾರವಾಡ ಗ್ರಾಮೀಣ ಠಾಣೆಯಲ್ಲಿ ಅರಬಾಜ್ ಸಹಚರರಾದ ಶಾನು, ರಹೀಮ್ ಮತ್ತು ಆತನ ಬಾಡಿಬಿಲ್ಡರ್‌‌ ಸೇರಿದಂತೆ ಒಟ್ಟು ನಾಲ್ಕು ಜನರ ವಿರುದ್ಧ ಪ್ರಕರಣ ದಾಖಾಲಾಗಿದೆ. ಆ ಮೂಲಕ ಫ್ರುಟ್ ಇರ್ಫಾನ್ ತರುವಾಯ ಆತನ ಮಗ ಹೊಸ ಅಧ್ಯಾಯ ಆರಂಭ ಮಾಡಿದಂತಾಗಿದೆ.

ಮಹ್ಮದ್ ಕುಡಚಿ ಎಂಬುವರು ಇವರ ವಿರುದ್ಧ ದೂರು ನೀಡಿದ್ದು, ಗ್ರಾಮೀಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

28/01/2021 01:51 pm

Cinque Terre

60.32 K

Cinque Terre

7

ಸಂಬಂಧಿತ ಸುದ್ದಿ