ಹುಬ್ಬಳ್ಳಿ:ಯುವಕನೊಬ್ಬನ ಹೆಸರಲ್ಲಿ ಫೇಸ್‌ಬುಕ್ ನಕಲಿ ಖಾತೆ ಸೃಷ್ಟಿಸಿ ಮಾನಹಾನಿ ಮಾಡಿದ ಘಟನೆಯೊಂದು ಹಳೇ ಹುಬ್ಬಳ್ಳಿಯಲ್ಲಿ ನಡೆದಿದೆ.
ಹೌದು..ಇಲ್ಲಿಯ ಹಳೇಹುಬ್ಬಳ್ಳಿಯ ಯುವಕನೊಬ್ಬನ ಹೆಸರಲ್ಲಿ ಫೇಸ್‌ಬುಕ್ ನಕಲಿ ಖಾತೆ ಸೃಷ್ಟಿಸಿದ ಕಿಡಿಗೇಡಿಗಳು, ಯುವಕನಿಗೆ ಎಚ್‌ಐವಿ ಇದೆ ಯಾರೂ ಹೆಣ್ಣು ನೀಡಬೇಡಿ ಎಂದು ಪೋಸ್ಟ್ ಮಾಡಿದ್ದಾರೆ. ನಕಲಿ ಖಾತೆಯಲ್ಲಿ ಯುವಕನ ನಗ್ನ ಚಿತ್ರದ ಜೊತೆ, ಅವನಿಗೆ ಪರಿಚಯ ಇರುವ ಇಬ್ಬರು ಯುವತಿಯರ ಚಿತ್ರ ಪೋಸ್ಟ್ ಮಾಡಿದ್ದಾರೆ. ಅದರ ಕೆಳಗೆ ಯುವಕನ ತಂದೆ, ತಾಯಿಯ ಮೊಬೈಲ್ ನಂಬರ್ ಹಾಕಿ, ಅವನನ್ನು ಯಾರೂ ನಂಬಬೇಡಿ ಎಂದು ನಮೂದಿಸಿದ್ದಾರೆ.ಈ ಕುರಿತು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
27/01/2021 11:02 am