ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಆಸ್ತಿ ವಿವಾದ ಹಿನ್ನೆಲೆ; ಅಂಗಡಿಗೆ ನುಗ್ಗಿ ಯುವಕನಿಗೆ ಹಲ್ಲೆ, ದೃಶ್ಯಾವಳಿ ಸಿಸಿ ಟಿವಿಯಲ್ಲಿ ಸೆರೆ

ಹುಬ್ಬಳ್ಳಿ:ಅದು ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ವೃದ್ಧಾಶ್ರಮ. ಆಶ್ರಮದ ಆಸ್ತಿ ವಿಚಾರಕ್ಕೆ ದೊಡ್ಡ ಗಲಾಟೆಯೇ ನಡೆದಿದೆ. ಅದರಲ್ಲೂ ಆಶ್ರಮದ ಅಧ್ಯಕ್ಷ, ಸದಸ್ಯನ ಕೊಲೆಗೆ ಸುಪಾರಿ ನೀಡಿದ್ದಲ್ಲದೇ ಮಾರಣಾಂತಿಕ ಹಲ್ಲೆ ನಡೆಸಿದ್ದು, ಅವಳಿ ನಗರವನ್ನೇ ಬೆಚ್ಚಿಬೀಳಿಸಿದೆ.

ಗಡಿಯಾರದಂಗಡಿಗೆ ನುಗ್ಗಿ ಹಲ್ಲೆ ಮಾಡುತ್ತಿರುವ ವ್ಯಕ್ತಿ; ಹಲ್ಲೆಯಿಂದ ತಪ್ಪಿಸಿಕೊಂಡು ಓಡುತ್ತಿರುವ ಮತ್ತೋರ್ವ ವ್ಯಕ್ತಿ; ಹಲ್ಲೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವ ಪೊಲೀಸರು- ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ.

ಹುಬ್ಬಳ್ಳಿಯ ಕೇಶ್ವಾಪುರ ರಸ್ತೆಯಲ್ಲಿ ಸ್ಟೀಫನ್ ಎಂಬಾತ ಗಡಿಯಾರದಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಇವರ ಮೇಲೆ ಮಹೇಶ ಎಂಬಾತ ಅಂಗಡಿಗೆ ನುಗ್ಗಿ ಹಲ್ಲೆ ನಡೆಸಿದ್ದು, ಅದೃಷ್ಟವಶಾತ್ ಸ್ಟೀಫನ್ ತಪ್ಪಿಸಿಕೊಂಡು ಬದುಕುಳಿದಿದ್ದಾರೆ. ಮಹೇಶ ಹೀಗೆ ಹಲ್ಲೆ ನಡೆಸುತ್ತಿರುವುದಕ್ಕೆ ಕಾರಣ ಕ್ರಿಶ್ಚಿಯನ್ ಸಮುದಾಯದ ವೃದ್ದಾಶ್ರಮ. ಪ್ರೆಸಿಡೆಂಟ್ ಸೆಂಟ್ ವಿಲ್ಸೆಂಟ್ ಡಿ ಸೊಸೈಟಿಯ ವೃದ್ಧಾಶ್ರಮದ ಅಧ್ಯಕ್ಷ ರಾಜು ಜೋಷೆಪ್, ಸ್ಟೀಫನ್ ನ ಕೊಲೆಗೆ ಸುಪಾರಿ ನೀಡಿದ್ದು, ಮಹೇಶ್ ಮಾರಾಕಾಸ್ತ್ರಗಳಿಂದ ಹಲ್ಲೆಗೆ ಮುಂದಾಗಿದ್ದಾರೆ ಎಂದು ಆರೋಪ ಮಾಡಿದ್ದು, ಮಹೇಶ ಹಲ್ಲೆ ನಡೆಸುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪ್ರಾಣಭಯದಲ್ಲಿ ಸ್ಟೀಫನ್ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಹುಬ್ಬಳ್ಳಿಯ ಭವಾನಿ ನಗರದಲ್ಲಿರುವ ವೃದ್ಧಾಶ್ರಮದ ಆಡಳಿತ ಮಂಡಳಿ ಹಲವು ದಿನಗಳ ಹಿಂದೆ ಬದಲಾವಣೆ ಆಗಿದೆ.‌ ಅಧ್ಯಕ್ಷ ಸ್ಥಾನಕ್ಕೆ ಹೊಸದಾಗಿ ಆಯ್ಕೆಯಾದ ರಾಜು ಜೋಷೆಪ್ ಹೊಸ ಆಡಳಿತ ಮಂಡಳಿ ರಚನೆ ಮಾಡಲು ಮುಂದಾಗಿದ್ದಾರೆ. ಅಲ್ಲದೇ ಈ ಹಿಂದೆ ಇದ್ದ ಆಡಳಿತ ಮಂಡಳಿ ಸದಸ್ಯರನ್ನು ವಜಾಗೊಳಿಸಿದ್ದಾರೆ. ಹೀಗಾಗಿ ಸ್ಟೀಫನ್ ಮತ್ತು ರಾಜು ಜೋಷೆಪ್ ನಡುವೆ ಗಲಾಟೆ ನಡೆದಿದೆ. ಅದೇ ದ್ವೇಷವಿಟ್ಟುಕೊಂಡು ಹಲ್ಲೆ ನಡೆಸಿದ್ದಾರೆ ಎಂದು ಸ್ಟೀಫನ್ ಆರೋಪಿಸಿದ್ದಾರೆ.

ಇನ್ನು ಈ ಬಗ್ಗೆ ರಾಜು ಜೋಷೆಪ್ ಅವರನ್ನು ಕೇಳಿದ್ರೆ ಅವರು ಹೇಳುವುದೇ ಬೇರೆ. ಹಲ್ಲೆ ಮಾಡಿರುವ ಮಹೇಶ್ ಯಾರು ಅನ್ನೋದೆ ನನಗೆ ಗೊತ್ತಿಲ್ಲ. ಯಾವ ಕಾರಣಕ್ಕೆ ಮಹೇಶ ಹಲ್ಲೆ ಮಾಡಿದ್ದಾರೆ ಅನ್ನೋದು ಗೊತ್ತಿಲ್ಲ. ನಾನು ಅಧ್ಯಕ್ಷನಾಗಿದ್ದಕ್ಕೆ ನನ್ನ ಮೇಲೆ ಈ ರೀತಿಯ ಆಪಾದನೆ ಮಾಡಲಾಗುತ್ತಿದೆ ಅಂತಾರೆ.

ಇನ್ನು ಪ್ರೆಸಿಡೆಂಟ್ ಸೆಂಟ್ ವಿಲ್ಸೆಂಟ್ ಡಿ ಸೊಸೈಟಿ ಆಸ್ತಿಯಲ್ಲಿ ವೃದ್ಧಾಶ್ರಮ ನಡೆಸಲಾಗುತ್ತಿದ್ದು, ಆಸ್ತಿಯನ್ನು 30 ವರ್ಷಗಳ ಕಾಲ ಲೀಸ್ ಗೆ ನೀಡಲಾಗಿದೆ. ಪ್ರತಿ ವರ್ಷ 2 ಸಾವಿರ ರೂಪಾಯಿ‌ ಹಣವನ್ನು ಸೊಸೈಟಿಗೆ ಕಟ್ಟಬೇಕು. ಆದ್ರೆ, ಹೊಸದಾಗಿ ಆಯ್ಕೆಯಾದ ಜೋಸೆಫ್ ತನ್ನ ಆಡಳಿತ ಮಂಡಳಿ ರಚನೆಗೆ ಅವಕಾಶ ನೀಡದ್ದಕ್ಕೆ ಈ ಹಲ್ಲೆ ಮಾಡಲಾಗಿದೆ. ಹೀಗಾಗಿ ಹಲ್ಲೆಯ‌ ಬಗ್ಗೆ ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರ ತನಿಖೆಯಿಂದಲೇ ಯಾರ ತಪ್ಪು ಅನ್ನೋದು ಹೊರಬರಬೇಕಿದೆ..

Edited By : Manjunath H D
Kshetra Samachara

Kshetra Samachara

24/01/2021 03:46 pm

Cinque Terre

108.16 K

Cinque Terre

3

ಸಂಬಂಧಿತ ಸುದ್ದಿ