ಹುಬ್ಬಳ್ಳಿ: ಸೆಲ್ಫಿ ಕ್ರೇಜ್ ಹಾಗೂ ಫೋಟೋ ಶೂಟ್‌ಗೆ ಹೋಗಿ ಕಿರೇಸೂರು ಕಾಲುವೆಯಲ್ಲಿ ಬಿದ್ದಿದ್ದ ಎಲ್ಲ ಮೂರು ಯುವಕರ ಶವ ಪತ್ತೆಯಾಗಿದೆ.
ಹುಬ್ಬಳ್ಳಿಯ ರಾಮನಗರದ ಓರ್ವ ಯುವತಿ ಸೇರಿದಂತೆ ಐವರು ಕಿರೇಸೂರು ಕಾಲುವೆ ಬಳಿ ಫೋಟೋ ಶೂಟ್‌ಗೆ ತೆರಳಿದ್ದರು. ಜೇನು ದಾಳಿಯಿಂದ ತಪ್ಪಿಸಿಕೊಳ್ಳಲು ಮುಂದಾಗಿ ಕಾಲುವೆಯಲ್ಲಿ ಬಿದ್ದಿದ್ದರು. ಕೂಡಲೇ ಇಬ್ಬರನ್ನು ರಕ್ಷಣೆ ಮಾಡಲಾಗಿತ್ತು. ಆದರೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ಇಬ್ಬರು ಯುವಕರ ಮೃತ ದೇಹವನ್ನು ನಿನ್ನೆ ಹೊರ ತೆಗೆಯಲಾಗಿತ್ತು. ಇನ್ನೊಬ್ಬನ ಸುಳಿವು ಸಿಕ್ಕಿರಲಿಲ್ಲ. ಕೊನೆಗೂ ಇಂದು ಬೆಳಿಗ್ಗೆ ಮತ್ತೆ ಕಾರ್ಯಾಚರಣೆ ಆರಂಭ ಮಾಡಿದ ಅಗ್ನಿಶಾಮಕ ದಳಕ್ಕೆ ನಾಪತ್ತೆಯಾಗಿದ್ದ ಯುವಕನ ದೇಹ ದೊರಕಿದೆ. ಕಾಲುವೆ ಟರ್ನಲ್‌ನಲ್ಲಿ ಯುವಕನ ದೇಹ ಸಿಲುಕಿಕೊಂಡಿತ್ತು. ಕೇಸರಿನಲ್ಲಿ ಸಿಲುಕಿದ್ದ ಮೃತ ದೇಹವನ್ನು ಪತ್ತೆ ಮಾಡಿ ಹೊರತಗೆಯಲಾಗಿದೆ.
ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಮೂರು ದಿನಗಳ ಕಾರ್ಯಾಚರಣೆ ಮುಕ್ತಾಯವಾಗಿದೆ. ಕಾರ್ಯಾಚರಣೆಯಲ್ಲಿ ಗ್ರಾಮೀಣ ಪೊಲೀಸ್ ಇನ್ಸ್‌ಪೆಕ್ಟರ್ ರಮೇಶ್ ಗೋಕಾಕ್, ಪಿಎಸ್‌ಐ ಮತ್ತು ಸಿಬ್ಬಂದಿ ನಾರಾಯಣ ಹಿರೇಹೊಳಿ, ಡೇವಿಡ್ ಸೇರಿದಂತೆ ಅಗ್ನಿಶಾಮಕ ಸಿಬ್ಬಂದಿ ತಹಶೀಲ್ದಾರ್‌ರ ಗ್ರಾಮೀಣ ಇಲಾಖೆಯ ಸಿಬ್ಬಂದಿ ಪಾಲ್ಗೊಂಡಿದ್ದರು.
Kshetra Samachara
24/01/2021 11:08 am