ಹುಬ್ಬಳ್ಳಿ: ಅಕ್ರಮ ಕಲ್ಲುಕ್ವಾರಿ ಮೇಲೆ ದಾಳಿ ನಡೆಸಿದ ಆಂತರಿಮ ಭದ್ರತಾ ದಳದ ಪೊಲೀಸರು ಅಪಾರ ಪ್ರಮಾಣದ ಸ್ಫೋಟಕ ವಶಕ್ಕೆ ಪಡೆದಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ಕಲಘಟಗಿ ತಾಲೂಕಿನ ಮುತ್ತಗಿ ಗ್ರಾಮದ ಶಿವಚಂದ್ರನ್ ಸ್ಟೋನ್ ಕ್ರಷರ್ ಯೂನಿಟ್ ಮೇಲೆ ದಾಳಿ ನಡೆಸಿದ
ಬೆಳಗಾವಿ ವಿಭಾಗದ ಇಂಟರ್ನಲ್ ಸೆಕ್ಯೂರಿಟಿ ದಿವಿಜನ್ ಡಿವೈಎಸ್ಪಿ ಅನಿಲ್ ಕುಮಾರ ಮತ್ತು ಪಿಐ ಜಯಶ್ರೀ ನೇತೃತ್ವದಲ್ಲಿ ದಾಳಿ ನಡೆಸಿ, 234 ಜಿಲೆಟಿನ್ ಕಡ್ಡಿ, ಮಗ್ ಬಾಕ್ಸ್ ಹಾಗೂ ಸ್ಫೋಟಕ ವಸ್ತುಗಳು ವಶಕ್ಕೆ ಪಡೆಯಲಾಗಿದೆ. ಯೂನಿಟ್ ಮಾಲೀಕ ಶಿವಕುಮಾರ ಪಾಟೀಲ್ ವಿರುದ್ಧ ಕಲಘಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Kshetra Samachara
22/01/2021 11:33 pm