ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸಿಬಿಐ ಮುಂದೆ ಮತ್ತೆ ಹಾಜರಾದ ಕರಿಗಾರ

ಧಾರವಾಡ: ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡದ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಶಿವಾನಂದ ಕರಿಗಾರ ಇಂದು ಮತ್ತೆ ಸಿಬಿಐ ಮುಂದೆ ವಿಚಾರಣೆಗಾಗಿ ಹಾಜರಾಗಿದ್ದಾರೆ.

ಸಿಬಿಐ ವಿಚಾರಣೆ ಎದುರಿಸಿ ಹೊರಗೆ ಬಂದ ಕರಿಗಾರ, ವಿನಯ್ ಹಾಗೂ ಯೋಗೀಶಗೌಡ ಗೌಡರ ಅವರ ಮಧ್ಯೆ ಕೆಡಿಪಿ ಸಭೆಯಲ್ಲಿ ನಡೆದ ವಾಗ್ವಾದದ ಬಗ್ಗೆ ಸಿಬಿಐ ನನ್ನನ್ನು ಕೇಳಿದ್ದಾರೆ. ಕೆಡಿಪಿ ಸಭೆಯಲ್ಲಿ ನಾನಿರಲಿಲ್ಲ. ಅದರ ನಂತರದ ಸಾಮಾನ್ಯ ಸಭೆಯಲ್ಲಿ ನಾನಿದ್ದೆ ಎಂದು ಸಿಬಿಐ ಅಧಿಕಾರಿಗಳಿಗೆ ಉತ್ತರಿಸಿದ್ದೇನೆ ಎಂದರು.

ಇದರ ಜೊತೆಗೆ ಮಧ್ಯಾಹ್ನದ ನಂತರ ಮತ್ತೆ ವಿನಯ್ ಆಪ್ತ ಕಾರ್ಯದರ್ಶಿ ಪ್ರಶಾಂತ ಕೇಕರೆ ಹಾಗೂ ಎಇಇ ಎಸ್.ಎನ್.ಗೌಡರ ಅವರನ್ನೂ ಸಿಬಿಐ ಅಧಿಕಾರಿಗಳು ವಿಚಾರಣೆಗೊಳಪಡಿಸಿದರು

Edited By : Manjunath H D
Kshetra Samachara

Kshetra Samachara

22/01/2021 10:09 pm

Cinque Terre

93.74 K

Cinque Terre

0

ಸಂಬಂಧಿತ ಸುದ್ದಿ