ಧಾರವಾಡ: ಮನೆಯ ಹಿತ್ತಲ ಬಾಗಿಲ ಕೀಲಿ ಮುರಿದು ಒಳನುಗ್ಗಿದ ಕಳ್ಳರು ಮನೆಯಲ್ಲಿದ್ದ ಚಿನ್ನ ಸೇರಿದಂತೆ ಹಣ ದೋಚಿಕೊಂಡು ಹೋಗಿರುವ ಘಟನೆ ಧಾರವಾಡ ತಾಲೂಕಿನ ಮಾರಡಗಿ ಗ್ರಾಮದಲ್ಲಿ ನಡೆದಿದೆ.
ಶಿವಲಿಂಗಪ್ಪ ಮೆಟ್ಟಿನ ಎಂಬುವವರಿಗೆ ಸೇರಿದ ಮನೆಯಲ್ಲೇ ಕಳ್ಳತನವಾಗಿದೆ. ಶಿವಲಿಂಗಪ್ಪನವರ ಪುತ್ರ ಭಾರತೀಯ ಸೇನೆಯಲ್ಲಿದ್ದು, ಅವರು ಧಾರವಾಡದಲ್ಲಿ ವಾಸವಿರುತ್ತಾರೆ. ಮಾರಡಗಿ ಗ್ರಾಮದಲ್ಲಿ ಶಿವಲಿಂಗಪ್ಪ ಹಾಗೂ ಅವರ ಪತ್ನಿ ವಾಸ ಮಾಡುತ್ತಿದ್ದಾರೆ.
ನಿನ್ನೆ ತಡರಾತ್ರಿ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಹಿತ್ತಲ ಬಾಗಿಲಿನ ಕೀಲಿ ಮುರಿದು ಒಳನುಗ್ಗಿದ ಕಳ್ಳರು, 3.50 ಗ್ರಾಂ ತೂಕದ ಚಿನ್ನದ ಸರ ಸೇರಿದಂತೆ 20 ಸಾವಿರ ಹಣ ದೋಚಿದ್ದಾರೆ.
ಘಟನಾ ಸ್ಥಳಕ್ಕೆ ಗ್ರಾಮೀಣ ಠಾಣೆ ಇನಸ್ಪೆಕ್ಟರ್ ಶ್ರೀಧರ ಸುತಾರೆ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Kshetra Samachara
19/01/2021 02:29 pm