ಅಣ್ಣಿಗೇರಿ: ಪಟ್ಟಣದಲ್ಲಿ ಕಳೆದ ಎರಡ್ಮೂರು ದಿನಗಳಿಂದ ಟ್ರ್ಯಾಕ್ಟರ್ ಹಾಗೂ ಅದರ ಬಿಡಿಭಾಗಗಳ ಕಳ್ಳತನವಾಗುತ್ತಿವೆ ಎಂಬ ವರದಿಯನ್ನು ಪಬ್ಲಿಕ್ ನೆಕ್ಸ್ಟ್ ಶುಕ್ರವಾರ ಮುಂಜಾನೆ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತುಕೊಂಡ ಸ್ಥಳೀಯ ಪೊಲೀಸರು ಕಳ್ಳರನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳು ಟ್ರ್ಯಾಕ್ಟರ್, ಟೇಲರ್ ಹಾಗೂ ಒಂದು ನೀರಿನ ಟ್ಯಾಂಕ್ ಅನ್ನು ಮಂಗಳವಾರ ರಾತ್ರಿ ಕಳ್ಳತನ ಮಾಡಿದ್ದರು. ಬಳಿಕ ಟೇಲರ್ ಮತ್ತು ನೀರಿನ ಟ್ಯಾಂಕ್‌ಗೆ ಬಣ್ಣ ಹಚ್ಚಿ ಸಮೀಪದ ಹುಲಕೋಟಿಯಲ್ಲಿ ಮಾರಾಟಕ್ಕೆ ಯತ್ನಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರ ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ಪಿಎಸ್ಐ ಎಲ್.ಕೆ.ಜೂಲಕಟ್ಟಿ, ಕಳ್ಳತನ ಮಾಡಿದ ಖದೀಮರು ಅಣ್ಣಿಗೇರಿ ಹಾಗೂ ಕೊಂಡಿಕೊಪ್ಪ ಗ್ರಾಮದವರಾಗಿದ್ದಾರೆ ಎಂದು ತಿಳಿಸಿದ್ದಾರೆ.
Kshetra Samachara
15/01/2021 07:15 pm