ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಹುಲಗಿನಕಟ್ಟಿ ಗ್ರಾಮದಲ್ಲಿ ಪತಿಯಿಂದಲೇ ಪತ್ನಿಯ ಕೊಲೆ

ಕಲಘಟಗಿ:ತಾಲೂಕಿನ ಹುಲಗಿನಕಟ್ಟಿ ಗ್ರಾಮದಲ್ಲಿ ಪತಿಯೇ ಪತ್ನಿಯನ್ನು ಹಗ್ಗದಿಂದ ಕೊಲೆ ಮಾಡಿರುವ ಪ್ರಕರಣ ಸ್ಥಳೀಯ ‌ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಹುಲಗಿನಕಟ್ಟಿ ಗ್ರಾಮದ ಲಕ್ಷ್ಮೀ ರುದ್ರಪ್ಪ ಚಿಕ್ಕಮ್ಮನವರ (19) ಎಂಬ ಮಹಿಳೆಯೇ ಕೊಲೆಯಾದ ದುರ್ದೈವಿಯಾಗಿದ್ದಾಳೆ. ಏಳು ತಿಂಗಳ ಹಿಂದಷ್ಟೇ ಇವರ ಮದುವೆಯಾಗಿತ್ತು ಎನ್ನಲಾಗಿದೆ.

ಪತಿ ರುದ್ರಪ್ಪ ಚಿಕ್ಕಮ್ಮನವರ (30) ತನ್ನ ಪತ್ನಿಯನ್ನು ಕೊಲೆ‌ ಮಾಡುವ ಉದ್ದೇಶದಿಂದ ದಿ:8-1-2021 ರಂದು ಸಾಯಂಕಾಲ ಹೊಲಕ್ಕೆ ಕರೆದುಕೊಂಡು ಹೋಗಿ ಹಗ್ಗದಿಂದ ಕುತ್ತಿಗೆಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಲ್ಲದೇ ತಾನು ಆತ್ಮಹತ್ಯೆ ‌ಮಾಡಿಕೊಳ್ಳಲು ಪ್ರಯತ್ನ ಮಾಡಿರುವುದಾಗಿ ಆರೋಪಿಸಿ ಕೊಲೆಗೀಡಾದ ಲಕ್ಷ್ಮೀ ಚಿಕ್ಕಮ್ಮನವರ ಅಣ್ಣ ಚಳಮಟ್ಟಿ ಗ್ರಾಮದ ಪ್ರದೀಪ ಮರದನ್ನವರ ಕಲಘಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸ್ಥಳಕ್ಕೆ ಪೊಲೀಸ್ ಉಪವರಿಷ್ಠಾಧಿಕಾರಿ ಎಂ ಬಿ ಸುಂಕದ‌ ಭೇಟಿ ನೀಡಿದ್ದಾರೆ. ಕಲಘಟಗಿ ಠಾಣೆ ಪಿ ಐ ವಿಜಯ ಬಿರಾದಾರ ಭೇಟಿ ನೀಡಿ ಐಪಿಸಿ 302,498 (ಎ) ಅಡಿಯಲ್ಲಿ ಪ್ರಕರಣ ದಾಖಲಿಸಿ ತೀವ್ರ ತನಿಖೆ ನಡೆಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

10/01/2021 04:29 pm

Cinque Terre

90.68 K

Cinque Terre

7

ಸಂಬಂಧಿತ ಸುದ್ದಿ