ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ನವಿಲುಗಳ ಸಮೇತ ಕದ್ದ ಆರೋಪಿ ಬಂಧನ

ನವಲಗುಂದ : ತಾಲೂಕಿನ ಅಳಗವಾಡಿ ಗ್ರಾಮದಲ್ಲಿ ನವಿಲುಗಳನ್ನು ಸಾಕಿದ್ದ ವ್ಯಕ್ತಿಯನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ನವಿಲುಗಳ ಸಮೇತ ಆರೋಪಿಯನ್ನು ಬಂಧಿಸಲಾಗಿದೆ.

ಇನ್ನು ಮೈಲಾರಿ ಮಲ್ಲಪ್ಪ ಚಿಗರಿಕ್ಯಾರ ಎಂಬ ವ್ಯಕ್ತಿಯೇ ತನ್ನ ಮನೆಯಲ್ಲಿ ಕೋಳಿಗಳೊಂದಿಗೆ ನವಿಲುಗಳನ್ನು ಸಾಕಿದ್ದು, ಖಚಿತ ಮಾಹಿತಿಯ ಮೇರೆಗೆ ಸಿ.ಐ.ಡಿ. ದಳವು ಕಾರ್ಯಾಚರಣೆ ನಡೆಸಿ ನವಿಲುಗಳನ್ನು ಮತ್ತು ಆರೋಪಿಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಒಂದು ವೇಳೆ ಯಾರಾದರೂ ಪ್ರಾಣಿ, ಪಕ್ಷಿಗಳನ್ನು ಸಾಕಿದ್ದರೆ ಪೊಲೀಸರಿಗೆ ಮಾಹಿತಿ ನೀಡುಬೇಕೆಂದು ಹುಬ್ಬಳ್ಳಿ ಅರಣ್ಯ ಸಂಚಾರಿ ದಳದ ಸಿ.ಐ.ಡಿ ಅಧಿಕಾರಿ ಮಹಾದೇವ ಯಲಿಗಾರ ತಿಳಿಸಿದ್ದಾರೆ. ಕಾರ್ಯಚಾರಣೆಯಲ್ಲಿ ಸಿಬ್ಬಂದಿಗಳಾದ ಎಸ್.ಎಸ್.ಪಾಟೀಲ್, ಆರ್.ವಿ.ಕುಂಬಾರ, ಎಂ.ಬಿ.ಕಾಂತೇಶ್ ಭಾಗಿಯಾಗಿದ್ದರು.

Edited By : Nagaraj Tulugeri
Kshetra Samachara

Kshetra Samachara

08/01/2021 05:45 pm

Cinque Terre

41.67 K

Cinque Terre

1

ಸಂಬಂಧಿತ ಸುದ್ದಿ