ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲೂಕಿನ ಜಾಂಬೋಟಿಯಲ್ಲಿ ಡಿಸೆಂಬರ್ 25ರಂದು ನಡೆದಿದ್ದ ಫೋಟೋಗ್ರಾಫರ್ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ.
ಕೊಲೆಯಾದ ವಿಜಯ್ ಫೋಟೋ ಸ್ಟುಡಿಯೋ ನಡೆಸುತ್ತಿದ್ದರು. ಅದೇ ಸ್ಟುಡಿಯೋದಲ್ಲಿ ಕೆಲಸ ಮಾಡಿಕೊಂಡಿದ್ದ ರಾಮಚಂದ್ರ ಎಂಬಾತ ಸ್ಟೂಡಿಯೋ ಮಾಲೀಕ ವಿಜಯ್ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಈ ವಿಷಯ ತಿಳಿದ ವಿಜಯ್ ಅವರು ರಾಮಚಂದ್ರನನ್ನು ಕೆಲಸದಿಂದ ತೆಗೆದು ಹಾಕಿದ್ದರು. ಇದಕ್ಕೆ ಅಸಮಾಧಾನಗೊಂಡಿದ್ದ ರಾಮಚಂದ್ರ ತನ್ನ ಸಹಚರರಿಗೆ ಹೇಳಿಸಿ ಬರ್ತಡೇ ಫೋಟೋ ತೆಗೆಯೋದಿದೆ ಬನ್ನಿ ಎಂದು ಹೇಳಿಸಿದ್ದಾನೆ. ನಂತರ ಜಾಂಬೋಟಿ ಅರಣ್ಯ ಪ್ರದೇಶದಲ್ಲಿ ವಿಜಯ್ ಅವಲಕ್ಕಿ ಆವರನ್ನು ಕರೆದೊಯ್ದು ರುಂಡ ಕತ್ತರಿಸಿ ಕೊಲೆ ಮಾಡಿದ್ದ. ಕೊಲೆ ಬಳಿಕ ಆರೋಪಿಗಳು ಅಲ್ಲಿಂದ ಕಾಲ್ಕಿತ್ತಿದ್ದರು.
ಈ ಪ್ರಕರಣ ಬೇಧಿಸಿದ ಪೊಲೀಸರು ಎಲ್ಲ ಆರೋಪಿಗಳನ್ನು ಬಂಧಿಸಿದ್ದಾರೆ.
Kshetra Samachara
04/01/2021 06:46 pm