ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವನ್ಯಜೀವಿ ಹಂತಕನ ಮನೆ ರೇಡ್: ಅರಣ್ಯಾಧಿಕಾರಿಗಳಿಗೆ ಶಾಕ್

ಬೆಳಗಾವಿ: ವನ್ಯಜೀವಿ ಹಂತಕ ಮೆಹಮೂದ್ ಅಲಿಖಾನನ ನೆಹರೂನಗರದ ಮನೆಯ ಮೇಲೆ ಅರಣ್ಯಾಧಿಕಾರಿಗಳ ತಂಡ ಇಂದು ಬೆಳಿಗ್ಗೆ ದಾಳಿ ನಡೆಸಿದ್ದಾರೆ. ಆತನ ಮನೆ ಹೊಕ್ಕ ಅರಣ್ಯಾಧಿಕಾರಿಗಳು ಅಲ್ಲಿ ಸಂಗ್ರಹಿಸಿಡಲಾಗಿದ್ದ ಕೊಂಬು ಹಾಗೂ ಇತರ ಬೇಟೆ ಸಾಮಗ್ರಿಗಳನ್ನು ಕಂಡು ದಂಗಾಗಿದ್ದಾರೆ. ಸದ್ಯ ಬೇಟೆಗಾರನ ಮನೆಯಿಂದ ಚಿಗರೆ ಕೊಂಬು ಸೇರಿದಂತೆ ಜೀವಂತ ಗುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.

ಕಳೆದ ಡಿ . 27 ರಂದು ಕಿತ್ತೂರಿನ ಅರಣ್ಯ ಪ್ರದೇಶದ ಕುಲವಳ್ಳಿಯಲ್ಲಿ ಜಿಂಕೆ ಬೇಟೆಯಾಡುತ್ತಿದ್ದ ನಾಲ್ವರು ಹಂತಕರ ಪೈಕಿ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.

ಪರಾರಿಯಾಗಿದ್ದ ಮೆಹಮೂದ್ ಮನೆ ಮೇಲೆ ನಾಗರಗಾಳಿ ಎಸಿಎಫ್ ಸಿ. ಜಿ. ಮಿರ್ಜಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ, ಚಿಗರೆ ಕೊಂಬು, ಪಾಯಿಂಟ್ 315 ರೈಫಲ್, ಎರಡು ಚಾಕುಗಳು, 2 ಟಾರ್ಚ್, ವಾಹನಕ್ಕೆ ಅಳವಡಿಸುವ ಟಾರ್ಚ್, 2 ವಾಕಿ ಟಾಕಿ, ಜೀವಂತ ಬುಲೆಟ್ ಗಳು 26, ಡಿಬಿಎಲ್ ಸೇರಿದಂತೆ ವನ್ಯಬೇಟೆಗೆ ಬೇಕಾದ ಸಾಮಗ್ರಿಗಳು ಈತನ ಮನೆಯಲ್ಲಿ ತಪಾಸಣೆ ನಡೆಸಿದಾಗ ಸಿಕ್ಕಿವೆ. ದಾಳಿ ವೇಳೆ ಪರಾರಿಯಾಗಿರುವ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

04/01/2021 04:25 pm

Cinque Terre

57.19 K

Cinque Terre

1

ಸಂಬಂಧಿತ ಸುದ್ದಿ